ಯುವಪೀಳಿಗೆ ತಂತ್ರಜ್ಞಾನಕ್ಕೆ ಅವಲಂಬಿತವಾಗಿ ಬೆಳೆಯುತ್ತಿದೆ: ಡಾ.ಅನಿಲ್ ಕೊಹ್ಲಿ
ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವ

ಕೊಣಾಜೆ: ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುವ ಮಟ್ಟಿಗೆ ಜಗತ್ತು ಬದಲಾಗುತ್ತಿದೆ. ವೃತ್ತಿ ಜೀವನದಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯವೂ ಮಹತ್ವದ್ದಾಗಿದೆ. ಜೀವನದಲ್ಲಿ ಆಯ್ಕೆ ಮಾಡಿದ ವೃತ್ತಿಯನ್ನು ಮೊದಲು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ದಿಲ್ಲಿಯ ಡೆಂಟಲ್ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಡಾ.ಅನಿಲ್ ಕೊಹ್ಲಿ ಹೇಳಿದ್ದಾರೆ.
ಅವರು ಸೋಮವಾರ ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತಂತ್ರಜ್ಞಾನ ಕ್ಷೇತ್ರ ವಿಪುಲವಾಗಿ ಬೆಳೆದಿದೆ. ಸ್ವಯಂಚಾಲಿತ ಸಾಮೂಹಿಕ ಸಾರಿಗೆ, ವಾಯುಯಾನ ಮತ್ತು ಕಂಪ್ಯೂಟರ್ ಗೇಮಿಂಗಳು ಜೀವನದ ಅವಿಭಾಜ್ಯ ಅಂಗಗಳಾಗಿದೆ. ಇಂತಹ ಅನೇಕ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಿಕೊಳ್ಳುವ ಮೂಲಕ ರೋಗಿಗಳನ್ನು ಗುಣಪಡಿಸುವಲ್ಲಿ ಮಹತ್ವವಾದ ಬೆಳವಣಿಗೆಯಾಗಿದೆ. ವಿಕಿರಣಶಾಸ್ತ್ರದ ಚಿತ್ರಗಳು, ರೋಗ ಶಾಸ್ತ್ರ ದ ಸ್ಲೈಡ್ಸ್, ರೋಗಿಯ ವಿದ್ಯುಜ್ಜನಿತ(ಎಲೆಕ್ಟ್ರಾನಿಕ್) ವೈದ್ಯಕೀಯ ದಾಖಲೆಗಳು, ಯಂತ್ರ ಕಲಿಕೆಯ ರೋಗಿಗಳ ರೋಗನಿರ್ಣಯ ಮತ್ತು ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದು ಮತ್ತು ವೈದ್ಯರ ಸಾಮರ್ಥ್ಯಗಳನ್ನು ಹೆಚ್ಚಿಸುವ ಮೂಲಕ ಮಹತ್ತರವಾದ ಬದಲಾವಣೆಗಳು ವೈದ್ಯಕೀಯ ಕ್ಷೇತ್ರದಲ್ಲಿ ನಡೆದಿದೆ ಎಂದರು.
ಮಾನವ ಇತಿಹಾಸದಲ್ಲಿ ವಿನಾಶಕಾರಿಯಂತೆ ನಡೆದ ಘಟನೆ ಎಂದರೆ ಅದು ಸಾಂಕ್ರಾಮಿಕ ಪಿಡುಗು ಇದು ಸಾಮಾನ್ಯವಾದ ಪಿಡುಗ ಅಲ್ಲ. ಇದು ಎಲ್ಲರನ್ನು ವಾಸ್ತವದ ಹತ್ತಿರಕ್ಕೆ ತಂದ ಪಿಡುಗಾಗಿದೆ. ಕೋವಿಡ್ 19 ನಂತರ ಆನ್‌ಲೈನ್ ಕಲಿಕೆಯು ಜನರಿಗೆ ಶಿಕ್ಷಣವನ್ನು ನೀಡುವಲ್ಲಿ ಬಹಳ ಮುಂದುವರೆದಿದ್ದು ಸುದ್ದಿ ಕೌಶಲ್ಯಗಳನ್ನು ಕುಳಿತ ಜಾಗದಲ್ಲಿ ಕಲಿಯುವಲ್ಲಿ ಬಹಳಷ್ಟು ಕೊಡುಗೆಯನ್ನು ನೀಡಿದೆ ಎಂದರು.
ಯೆನೆಪೋಯ ವಿವಿಯ ಕುಲಾಧಿಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕ್ಯಾಲಿಕಟ್ ಮೆಡಿಕಲ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಖಾಸಿಂ ಅಬ್ದುಲ್ ಸಲೀಂ ಅವರಿಗೆ ಡಾಕ್ಷರ್ ಆಫ್ ಸೈನ್ಸ್( ಹಾನರೀಸ್ ಕೌಸ) ಪ್ರದಾನ ಮಾಡಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ಯುವ ಸಮುದಾಯವೇ ನಮ್ಮ ಭವಿಷ್ಯ. ಇಂದಿನ ಅಧುನಿಕ ಕಾಲಘಟ್ಟದಲ್ಲಿ ಅನೇಕ ಸವಾಲುಗಳೂ ಇವೆ. ಉತ್ತಮ ಮೌಲ್ಯಯುತ ಶಿಕ್ಷಣದೊಂದಿಗೆ ಮುನ್ನಡೆಯಬೇಕಿದ್ದು, ಈ ನಿಟ್ಟಿನಲ್ಲಿ ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯ ದೂರದೃಷ್ಟಿಕೋನದ ಮೂಲಕ ಬೆಳೆಯುತ್ತಿದೆ ಎಂದರು.
ಚಂಡೀಗಢ ಪಿಜಿಐಎಂಇಆರ್ ನ ಪ್ರಾಧ್ಯಾಪಕ ಪದ್ಮಶ್ರೀ ಪುರಸ್ಕೃತ ಪ್ರೊ.ಯೋಗೀಶ್ ಕುಮಾರ್ ಚಾವ್ಲ, ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದಿನ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಿದ್ದಂತೆಯೇ ವೈದ್ಯಕೀಯ ರಂಗದಲ್ಲಿ ಮಹತ್ತರವಾದ ಬದಲಾವಣೆಗಳಾಗುತ್ತಿವೆ. ಡಿಜೆಟಲ್ ಮೆಡಿಸಿನ್ ವ್ಯವಸ್ಥೆಯಂತಹ ಅನೇಲ ಆಧುನಿಕ ವ್ಯವಸ್ಥೆಗಳು ಮೆಡಿಕಲ್ ಕ್ಷೇತ್ರದಲ್ಲಿ ರೂಪುಗೊಳ್ಳುತ್ತಿದೆ. ಯಶಸ್ಸಿನ ಹಾದಿಯಲ್ಲಿ ಸೋಲು ಗೆಲುವು ಸಾಮನ್ಯ. ಉದ್ದೇಶಿತ ಗುರಿಯಿಯೊಂದಿಗೆ ಎಲ್ಲಾ ಅಡೆತಡೆಗಳನ್ನು ಮೀರಿ ನಾವು ಬೆಳೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಐಎಇ ಟ್ರಸ್ಟ್ನ ಅಧ್ಯಕ್ಷ ವೈ ಮಹಮ್ಮದ್ ಕುಂಞಿ, ಯೆನೆಪೋಯ ಕುಲಸಚಿವರಾದ ಡಾ.ಎಂ.ವಿಜಯ ಕುಮಾರ್ , ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಪರೀಕ್ಷಾಂಗ ಕುಲಸಚಿವರಾದ ಡಾ.ಬಿ.ಟಿ.ನಂದೀಶ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಅಖ್ತರ್ ಹುಸೈನ್, ಡಾ.ಎಂ.ಎಸ್.ಮೂಸಬ್ಬ, ಡಾ.ಲೀನಾ, ಡಾ.ಸುನಿತಾ ಸಲ್ದಾನ, ಡಾ.ಶರೀನಾ, ಡಾ.ಅರುಣ್, ಡಾ.ಮಹಮ್ಮದ್ ಗುಲ್ಜಾರ್, ಜಾನೆಟ್ ಪ್ರೇಮ ಮಿರಾಂಡ, ಯೆನೆಪೋಯ ಅಬ್ದುಲ್ಲಾ ಜಾವೆದ್, ಡಾ.ವೇದ್ ಪ್ರಕಾಶ್ ಮಿಶ್ರಾ, ಮೊಯ್ದಿನ್ ಖುರ್ಷಿದ್, ಡಾ.ಗುರುರಾಜ, ಡಾ.ಶಿವಪ್ರಸಾದ್, ಡಾ.ಪುನೀತ್ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು. ಡಾ.ಮಲ್ಲಿಕಾ ಶೆಟ್ಟಿ ಹಾಗೂ ಡಾ.ರೋಚೆಲ್ಲೆ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.
1370ಕ್ಕೂ ಅಧಿಕ ಪದವೀಧರರಿಗೆ ಪದವಿ: ಘಟಿಕೋತ್ಸವದಲ್ಲಿ 1370ಕ್ಕೂ ಅಧಿಕ ಪದವೀಧರರಿಗೆ ಪಿಎಚ್‌ಡಿ, ಎಂಸಿಎಚ್, ಎಂಡಿ/ಎಂಎಸ್, ಎಂಡಿಎಸ್, ಎಂ.ಎಸ್‌ಸಿ(ನರ್ಸಿಂಗ್), ಎ.ಪಿಟಿ, ಸ್ನಾತಕೋತ್ತರ ಡಿಪ್ಲೋಮ, ಎಂಬಿಬಿಎಸ್, ಬಿಡಿಎಸ್, ಬಿಎಸ್ಸಿ(ನರ್ಸಿಂಗ್), ಬಿಪಿಟಿ, ಅಲೈಡ್ ಸೈನ್ಸ್, ವಿಜ್ಞಾನ ಹಾಗೂ ವಾಣಿಜ್ಯ ಮತ್ತು ನಿರ್ವಹಣೆಯ ವಿಭಾಗದಲ್ಲಿ ಪದವಿ ಪ್ರದಾನ ಮಾಡಲಾಯಿತು. ಕಲಿಕೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ 7 ಪದವೀಧರರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.