KRS ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ; ಪ್ರವಾಸಿಗರಲ್ಲಿ ಆತಂಕ
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ (KrishnaRajaSagara Dam) ಬೃಂದಾವನದಲ್ಲಿ ರವಿವಾರ ಸಂಜೆ ಚಿರತೆ ಕಾಣಿಸಿಕೊಂಡ ಕಾರಣ ಪ್ರವಾಸಿಗರು ಕೆಲಕಾಲ ಭಯಭೀತರಾದರು.
ಬೃಂದಾವನದ ಮೀನುಗಾರಿಕೆ ಇಲಾಖೆಯ ಅಕ್ಟೇರಿಯಂ ಬಳಿಯ ರಾಯಲ್ ಆರ್ಕಿಡ್ ಹೋಟೆಲ್ ಕಡೆ ಚಿರತೆ ಹೋಗುತ್ತಿರುವುದು ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಂದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಬೃಂದಾವನ ಪ್ರವೇಶಕ್ಕೆ ಸೋಮವಾರ ನಿರ್ಬಂಧ ವಿಧಿಸಲಾಗಿದೆ.
15 ದಿನಗಳ ಅಂತರದಲ್ಲಿ ಕೆ ಆರ್ ಎಸ್ ಬೃಂದಾವನದಲ್ಲಿ ಮೂರು ಬಾರಿ ಚಿರತೆ ಕಾಣಿಸಿಕೊಂಡಿದ್ದು, ಎರಡು ಕಡೆ ಬೋನು ಇರಿಸಿದ್ದರೂ ಅದು ಬೋನಿಗೆ ಬೀಳುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Next Story