ಕಿನ್ಯಾ: ವಿನ್ಯಾಸ ಟೈಲರಿಂಗ್ ಸೆಂಟರ್ ಶುಭಾರಂಭ

ಕಿನ್ಯಾ: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಿನ್ಯಾ ಇದರ ಸಹಯೋಗದೊಂದಿಗೆ ವಿನ್ಯಾಸ ಟೈಲರಿಂಗ್ ಸೆಂಟರ್‍ನ 22ನೇ ಬ್ಯಾಚ್ ಉದ್ಘಾಟನಾ ಸಮಾರಂಭವು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‍ನ ವಠಾರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಕಿನ್ಯಾ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಲಕ್ಷ್ಮಿ ಅವರು ಉದ್ಘಾಟಿಸಿದರು.
ಕಿನ್ಯಾ ಗ್ರಾಮ ಪಂಚಾಯತ್‍ನ ಸದಸ್ಯೆ ಶಾಯಿನ ಕಾರ್ಯಕ್ರಮದ ಕುರಿತು ಮಾತನಾಡಿದರು. ಆಸರೆ ವಿಮೆನ್ಸ್ ಫೌಂಡೇಶನ್‍ನ ಸದಸ್ಯೆ ಮುಮ್ತಾಝ್ ಹಕೀಮ್ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಆಸರೆ ವಿಮೆನ್ಸ್ ಫೌಂಡೇಶನ್‍ನ ನಿರ್ದೇಶಕಿ ಶಬೀನ ಅಖ್ತರ್ ಅಧ್ಯಕ್ಷೀಯ ನುಡಿಗಳನ್ನಾಡಿ, ಶಿಕ್ಷಣ ಎನ್ನುವಂತಹದ್ದು ಎಲ್ಲರಿಗೂ ಲಭ್ಯವಾಗುವುದಿಲ್ಲ, ನಮಗೆ ದಕ್ಕಿರುವ ಯಾವುದೇ ಉತ್ತಮವಾದ ಶಿಕ್ಷಣವನ್ನು ಇನ್ನೊಬ್ಬರಿಗೆ ಕಲಿಸಿಕೊಟ್ಟಾಗಲೆ ಅದಕ್ಕೆ ಮೌಲ್ಯ ದಕ್ಕುವುದು. ನಮಗೆ ದಕ್ಕಿರುವ ಅವಕಾಶವನ್ನು ಸಂಪೂರ್ಣ ಉಪಯೋಗಿಸಿ ಇದರಿಂದ ಮುಂದೆ ಇನ್ನಷ್ಟು ಮಹಿಳೆಯರು ಸ್ವಾವವಲಂಬಿಗಳಾಗಬೇಕೆಂದು ಹಾರೈಸಿದರು.
ಕಿನ್ಯಾ ಗ್ರಾಮ ಪಂಚಾಯತ್‍ನ ಸದಸ್ಯೆ ಬುಶ್ರಾ, ಆಸರೆ ವಿಮೆನ್ಸ್ ಫೌಂಡೇಶನ್‍ನ ಅಧ್ಯಕ್ಷರಾದ ಸಲ್ಮಾ ಉಮರ್ ಪುತ್ತಿಗೆ, ಉಪಾಧ್ಯಕ್ಷರಾದ ಆತಿಕ ರಫೀಕ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಮೆಲ್ವಿಚಾರಕಿ ಝೊಹರಾ ಉಳ್ಳಾಲ, ಟೈಲರಿಂಗ್ ಶಿಕ್ಷಕಿ ಫಾತಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ಯಾಲೆಂಟ್ ಗ್ರಾಜ್ಯುವೇಟ್ ಅಸೋಸಿಯೇಶನ್‍ನ ಸದಸ್ಯೆ ಸಾರ, ಮಸ್‍ಕುರುನ್ನೀಸ ಕಾರ್ಯಕ್ರಮ ನಿರೂಪಿಸಿದರು.