Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಮನಿತರ ಕಣ್ಣಿಗೆ ಮಣ್ಣೆರಚುವವರು

ದಮನಿತರ ಕಣ್ಣಿಗೆ ಮಣ್ಣೆರಚುವವರು

ಕಿರಣ್ ಶಿವಪುರ, ಹೊಳಲ್ಕೆರೆಕಿರಣ್ ಶಿವಪುರ, ಹೊಳಲ್ಕೆರೆ7 Nov 2022 11:48 PM IST
share
ದಮನಿತರ ಕಣ್ಣಿಗೆ ಮಣ್ಣೆರಚುವವರು

 ದೇಶದಲ್ಲಿ ಮತ್ತು ರಾಜ್ಯದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯ ಕಾನೂನು ಮತ್ತು ಸಂವಿಧಾನಬದ್ಧವಾಗಿ ನೆಮ್ಮದಿ ಮತ್ತು ಸಮಾನತೆಯಿಂದ ಬದುಕಲು ಅವಕಾಶ ಕೊಡಬೇಕಿದ್ದ ಜನಪ್ರತಿನಿಧಿಗಳು ಸದಾ ಅನ್ಯಾಯವೆಸಗುತ್ತಿದ್ದಾರೆ. ಹಿಂದಿನಿಂದಲೂ ಇದು ನಡೆದುಕೊಂಡು ಬರುತ್ತಿದ್ದು, ಅಂತಹ ವಂಚನೆಗಳಿಗೆ ಅವಕಾಶವಾಗಬಾರದೆಂದು ಬಿಗಿಯಾದ ಕಾನೂನುಗಳನ್ನು ಜಾರಿಗೆ ತಂದಿದ್ದರೂ ಈಗಲೂ ನೇರವಾಗಿ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಮೀಸಲಿದ್ದ ಹಣವನ್ನು ಇತರ ಕೆಲಸಗಳಿಗೆ ಬಳಕೆ ಮಾಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಎಸ್‌ಸಿ (ಪರಿಶಿಷ್ಟ ಜಾತಿ) ಜನಸಂಖ್ಯೆ ಶೇ. 17.15, ಎಸ್‌ಟಿ (ಪರಿಶಿಷ್ಟ ಪಂಗಡ) ಜನಸಂಖ್ಯೆ ಶೇ. 6.95. ಒಟ್ಟಾರೆ ರಾಜ್ಯದ ಜನಸಂಖ್ಯೆಯಲ್ಲಿ ಶೇ. 24.10 ಎಸ್‌ಸಿ-ಎಸ್‌ಟಿ ಸಮುದಾಯದ ಜನಸಂಖ್ಯೆ ಇದೆ. ಈ ಸಮುದಾಯಗಳು ಅಭಿವೃದ್ಧಿಯಲ್ಲಿ ಹಿಂದೆ ಉಳಿಯಬಾರದು, ಅಭಿವೃದ್ಧಿಯ ಅಂತರ ಕಡಿಮೆ ಆಗಬಾರದು ಎಂಬ ಕಾರಣದಿಂದ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಆಗಿನ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನೇಯ ಅವರು ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲು ಇಡುವಂತಹ SC SP-TSP ಎಂಬ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದಿದ್ದರು. ಈ ಕಾಯ್ದೆಯ ಪ್ರಕಾರ ಪ್ರತೀ ವರ್ಷ ಸರಕಾರಗಳು ತಮ್ಮ ವಾರ್ಷಿಕ ಆಯವ್ಯಯದ ಅಂದಾಜು ಪಟ್ಟಿ ಸಿದ್ಧಗೊಳಿಸುವಾಗ ಈ ಪರಿಶಿಷ್ಟ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿರಿಸಬೇಕು. ಸರಕಾರದ 36 ಇಲಾಖೆಗಳ ಮುಖೇನ ಒಟ್ಟಾರೆ 422 ಕಾರ್ಯಕ್ರಮಗಳ ಮೂಲಕ ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಸದ್ಬಳಕೆಯಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಆಯಾ ವರ್ಷವೇ ಆ ಹಣವನ್ನು ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮಾಡಬೇಕು. ಒಂದು ವೇಳೆ ಯೋಜನೆ ಜಾರಿಗೊಳಿಸುವಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಈ ಕಾಯ್ದೆಯ ಮತ್ತೊಂದು ಮುಖ್ಯವಾದ ಅಂಶವೆಂದರೆ ಒಂದು ವೇಳೆ ಈ ಮೀಸಲು ಅನುದಾನ ಕೆಲವು ಕಾರಣಗಳಿಂದ ಖರ್ಚಾಗದೆ ಉಳಿದರೆ ಇದು ಮುಂದಿನ ವರ್ಷಕ್ಕೆ ಬಳಕೆಯಾಗುತ್ತದೆ.

ಆದರೆ ಎಲ್ಲವೂ ಈ ಕಾಯ್ದೆಯಂತೆ ನಡೆಯುತ್ತಿದೆಯೇ?
  ಹೊಸದುರ್ಗ ವಿಧಾನಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಿರುವ ಕ್ಷೇತ್ರ. ಇಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಗೆದ್ದಿರುವುದು ಅವರ ಪ್ರಭಾವ, ಜನಪರ ವಿಶ್ವಾಸದಿಂದ ಇರಬಹುದು. ಆದರೆ ಇದೇ ಅವಕಾಶ ಬಳಸಿಕೊಂಡು ಎಸ್‌ಸಿ-ಎಸ್‌ಟಿ ಸಮುದಾಯಗಳಿಗೂ ಸ್ವಲ್ಪವಿಶೇಷ ಅವಕಾಶ ಕೊಟ್ಟು ಅವರ ಉದ್ಧಾರಕ್ಕೆ ಪ್ರಯತ್ನಿಸಬೇಕಾದ ಶಾಸಕರು ಆ ಸಮುದಾಯಗಳಿಗೆಂದೇ ಮೀಸಲಾದ ಹಣವನ್ನು ಇತರ ಕೆಲಸಗಳಿಗೆ ಬಳಸಲು ಶಿಫಾರಸು ಮಾಡುವುದು ಎಷ್ಟು ಸರಿ.?

 ಇದೇ ಪರಿಶಿಷ್ಟ ಜಾತಿಗೆ ಸೇರಿದ ಚಿತ್ರದುರ್ಗ ಲೋಕಸಭಾ ಸದಸ್ಯರು ಖುದ್ದು ನಡೆಸಿದ ಸಭೆಯೊಂದರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಅವರು ಅಧಿಕಾರಿಗಳ ಈ ನಡೆಗೆ ಬೇಸರ ಮತ್ತು ಅಸಮಾಧಾನ ವ್ಯಕ್ತಪಡಿಸಿರುವ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿದೆ.
 ಎಸ್‌ಸಿ-ಎಸ್‌ಟಿ ತೀರಾ ಹಿಂದುಳಿದ ಪರಿಶಿಷ್ಟ ಗುಂಪಿಗೆ ಸೇರಿದ, ಬಡತನದ, ಅನಕ್ಷರಸ್ಥ ಸಮುದಾಯಗಳು. ಈ ಸಮುದಾಯಗಳನ್ನು ಆಕಾಶದಲ್ಲಿ ತೇಲುವಂತೆ ಮಾಡಿ, ಧರೆಯಲ್ಲಿ ಸ್ವರ್ಗದ ಸೌಲಭ್ಯ ನೀಡಿ ಉದ್ಧರಿಸುತ್ತೇವೆ... ಎಂದು ದೊಡ್ಡದಾಗಿ ಬಿಂಬಿಸಿ ಅವರಿಂದ ಮತ ಪಡೆದು ರಾಜಕಾರಣಿಗಳು ಗೆದ್ದು ಬರುತ್ತಾರೆ. ನಂತರ ಆಗುವುದು ಈ ತರದ ವಂಚನೆಗಳು.
 
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷದ ಒಂದೇ ಸರಕಾರವಿದೆ. ಜೊತೆಗೆ ಚಿತ್ರದುರ್ಗ ಜಿಲ್ಲೆಗೆ ಸೇರಿದ ಪ್ರತಿನಿಧಿಯೊಬ್ಬರು ದೊಡ್ಡ ಸ್ಥಾನದ ಮಂತ್ರಿಯಾಗುವ ಮೂಲಕ ಕೇಂದ್ರ ಸರಕಾರದ ಭಾಗವಾಗಿದ್ದಾರೆ. ಈ ಅವಕಾಶ ಬಳಸಿಕೊಂಡು ವಿಶೇಷ ಅನುದಾನ ತಂದು ಎಲ್ಲರ ಉದ್ಧಾರಕ್ಕೆ ಬಳಸಬಹುದು. ಅದನ್ನು ಬಿಟ್ಟು ಈ ರೀತಿ ಯಾರದೋ ಪಾಲನ್ನು ಇನ್ಯಾರಿಗೋ ಕೊಡಬೇಡಿ. ಶತ-ಶತಮಾನಗಳಿಂದ ವಂಚಿತರಾದ ಸಮುದಾಯಗಳಿವು. ಇನ್ನು ಮುಂದಾದರೂ ಎಲ್ಲರೊಂದಿಗೆ ಸಮಾನತೆಯಿಂದ ಬೆರೆತು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ. ಇಂತಹ ತಾರತಮ್ಯಗಳಿಗೆ ಇನ್ನೊಂದು ಉದಾಹರಣೆಯಾಗಿ ಇತ್ತೀಚೆಗೆ ಪತ್ರಿಕೆಯೊಂದಲ್ಲಿ ಬಂದಿದ್ದ ಟೆಂಡರ್ ಜಾಹೀರಾತೊಂದು ಈ ದೇಶದಲ್ಲಿ ಇನ್ನೂ ಹಸಿಯಾಗಿಯೇ ಇರುವ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ಎತ್ತಿ ತೋರಿಸುವುದರ ಜೊತೆಗೆ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಿದೆ.

1) ಪೂಜಾ ಸಾಮಗ್ರಿ ಮಾರಾಟ ಮಾಡುವ ಸ್ಥಳದ ಟೆಂಡರ್ ಸಾಮಾನ್ಯರಿಗೆ ಮೀಸಲು.
2) ಈಡುಗಾಯಿ ಆಯ್ದುಕೊಳ್ಳುವ ಹಕ್ಕಿನ ಟೆಂಡರ್ ಸಾಮಾನ್ಯರಿಗೆ ಮೀಸಲು.
3) ಎಳನೀರು ಮಾರಾಟ ಸಾಮಾನ್ಯರಿಗೆ.
4) ಮೆರಿಗೋ ರೌಂಡ್ ಶುಲ್ಕ ವಸೂಲು ಸಾಮಾನ್ಯರಿಗೆ ಮೀಸಲು.
5) ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪಾದರಕ್ಷೆ ಕಾಯ್ದುಕೊಳ್ಳುವ ಹಕ್ಕಿನ ಟೆಂಡರ್ - ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಮೀಸಲು
6) ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಪಾದರಕ್ಷೆ ಕಾಯ್ದುಕೊಳ್ಳುವ ಹಕ್ಕಿನ ಟೆಂಡರ್ - ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಮೀಸಲು...!!!
ಈ ಜಾಹೀರಾತು ಕೊಟ್ಟ ಮನುಷ್ಯನ ಅಥವಾ ಮಂಡಳಿಯ ದೃಷ್ಟಿಯಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಗಳ ಬಗ್ಗೆ ಯಾವ ಭಾವನೆ ಇರಬಹುದು..? ಇವರು ಕೇವಲ ಚಪ್ಪಲಿ ಕಾಯುವ ಕೆಲಸಕ್ಕಷ್ಟೇ ಸೀಮಿತವೆಂದೇ..? ಯಾವ ಒಳ್ಳೆಯ ಕೆಲಸಗಳಿಗೂ ಈ ಸಮುದಾಯಗಳು ಯೋಗ್ಯವಲ್ಲವೇ..? ಈ ತರದ ತಾರತಮ್ಯ ಮನಸ್ಥಿತಿ ತೊಲಗಲು ಇನ್ನೂ ಎಷ್ಟು ಶತಮಾನಗಳು ಬೇಕು...? ಸಾಕಷ್ಟು ವಿವಾದದ ನಂತರ ಈ ಟೆಂಡರ್ ಸದ್ಯಕ್ಕೆ ರದ್ದುಗೊಂಡಿರಬಹುದು. ಆದರೆ ಇಂತಹವು ಇನ್ನೂ ನಮ್ಮ ನಡುವೆ ಜೀವಂತವಿರುವುದು ಅಷ್ಟೇ ಸ್ಪಷ್ಟ.
ಮೀಸಲು ಕ್ಷೇತ್ರದ ಹೆಸರಿನಿಂದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ಗೆದ್ದು ಬರುವ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಕ್ಕೆ, ತಮ್ಮ ಸಮುದಾಯಗಳಿಗೆ ನ್ಯಾಯ ಕೊಡಿಸುತ್ತಿದ್ದೇವಾ...? ಎಂದು ಇನ್ನಾದರೂ ತಮ್ಮನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ..!

share
ಕಿರಣ್ ಶಿವಪುರ, ಹೊಳಲ್ಕೆರೆ
ಕಿರಣ್ ಶಿವಪುರ, ಹೊಳಲ್ಕೆರೆ
Next Story
X