ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ದಿ ಶೆಪರ್ಡ್ಸ್ ಇಂಟರ್ ನ್ಯಾಶನಲ್ ಅಕಾಡಮಿ ವಿದ್ಯಾರ್ಥಿಗಳ ಸಾಧನೆ

ಮಂಗಳೂರು, ನ.8: ಉಡುಪಿಯ ಕುರ್ಕಾಲುವಿನಲ್ಲಿ KEN-E-MABUNI-SHITO-RYU- KARATE SCHOOL OF INDIA ಇದರ ಉಡುಪಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಆಹ್ವಾನಿತ ತಂಡಗಳ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನ ಕುಮಿಟೆ ವಿಭಾಗದಲ್ಲಿ ಮಂಗಳೂರಿನ 'ದಿ ಶೆಪರ್ಡ್ಸ್ ಇಂಟರ್ ನ್ಯಾಶನಲ್ ಅಕಾಡಮಿ'ಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
'ದಿ ಶೆಪರ್ಡ್ಸ್ ಇಂಟರ್ ನ್ಯಾಶನಲ್ ಅಕಾಡಮಿ'ಯಿಂದ ಸ್ಪರ್ಧಿಸಿದ್ದ 11 ವಿದ್ಯಾರ್ಥಿಗಳು ಪ್ರಶಸ್ತಿ ಗಳಿಸಿದ್ದಾರೆ.
ಓರ್ವ ವಿದ್ಯಾರ್ಥಿ ಪ್ರಥಮ, ಮೂವರು ದ್ವಿತೀಯ ಹಾಗೂ ಏಳು ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಗಳಿಸಿ ಕುಮಿಟೆ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.
Next Story