ಆಫ್ರಿಕಾದಲ್ಲಿ ಬಂಧಿತ 16 ಭಾರತೀಯರ ಬಿಡುಗಡೆಗೆ ಪ್ರಯತ್ನಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದ ಪಿಣರಾಯಿ ವಿಜಯನ್

ತಿರುವನಂತಪುರಂ: ಇಕ್ವೆಟೋರಿಯಲ್ ಗಿನಿಯಲ್ಲಿ ಅಲ್ಲಿನ ಪ್ರಾಧಿಕಾರಗಳಿಂದ ಬಂಧನಕ್ಕೊಳಗಾಗಿರುವ 16 ಮಂದಿ ಭಾರತೀಯ ನಾವಿಕರ ಪೈಕಿ ಮೂರು ಮಂದಿ ಕೇರಳದವರಾಗಿರುವುದರಿಂದ ಅವರೆಲ್ಲರ ಶೀಘ್ರ ಬಿಡುಗಡೆಗೆ ಸರ್ಕಾರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Kerala Chief Minister Pinarayi Vijayan) ಅವರು ಪ್ರಧಾನಿ ನರೇಂದ್ರ ಮೋದಿಗೆ (Prime Minister Narendra Modi) ಪತ್ರ ಬರೆದು ಈ ವಿಚಾರ ಕುರಿತು ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.
ಇಕ್ವೆಟೋರಿಯಲ್ ಗಿನಿ ಮತ್ತು ನೈಜೀರಿಯಾದಲ್ಲಿರುವ ಭಾರತೀಯ ದೂತಾವಾಸಗಳಿಗೆ ಸೂಕ್ತ ನಿರ್ದೇಶನ ನೀಡಿ ಬಂಧಿತ ನಾವಿಕರ ಬಿಡುಗಡೆಗೆ ಪ್ರಯತ್ನಿಸಲು ಸೂಚಿಸುವಂತೆಯೂ ಪಿಣರಾಯಿ ಅವರು ಕೋರಿದ್ದಾರೆ.
ನಾರ್ವೇ ದೇಶದ ಹಡಗು ಎಂಟಿ ಹಿರಾಯಿಕ ಐಡನ್ ಇದರಲ್ಲಿದ್ದ ನಾವಿಕರನ್ನು ಆಗಸ್ಟ್ 12 ರಿಂದ ಅಲ್ಲಿನ ಪ್ರಾಧಿಕಾರಗಳು ತಮ್ಮ ವಶದಲ್ಲಿರಿಸಿಕೊಂಡಿವೆ. ಅದರಲ್ಲಿದ್ದ 26 ಮಂದಿಯಲ್ಲಿ 16 ಮಂದಿ ಭಾರತೀಯರಾಗಿದ್ದಾರೆ,
ಹಡಗು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿಲ್ಲದೇ ಇದ್ದರೂ ನಾವಿಕರ ಶೀಘ್ರ ಬಿಡುಗಡೆಗಾಗಿ ಅದರ ಕಂಪೆನಿ ದಂಡ ಮೊತ್ತ ಪಾವತಿಸಲು ಸಿದ್ಧವಿದೆ ಎಂದು ಪಿಣರಾಯಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
16 Indian sailors, part of a 26 member crew of MT Heroic Idun detained by Equatorial Guinea; Crew says that the vessel is being illegally handed over to Nigeria. pic.twitter.com/EI95IyaFYi
— Sidhant Sibal (@sidhant) November 6, 2022







