Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಮಟಪಾಡಿ: ನ. 12ರಂದು ಸಂಪ್ರದಾಯ ಶೈಲಿಯ...

ಮಟಪಾಡಿ: ನ. 12ರಂದು ಸಂಪ್ರದಾಯ ಶೈಲಿಯ ಯಕ್ಷಗಾನ ಪ್ರದರ್ಶನ

8 Nov 2022 9:11 PM IST
share
ಮಟಪಾಡಿ: ನ. 12ರಂದು ಸಂಪ್ರದಾಯ ಶೈಲಿಯ ಯಕ್ಷಗಾನ ಪ್ರದರ್ಶನ

ಉಡುಪಿ, ನ.8: ಸುಮಾರು 30-40 ವರ್ಷಗಳ ಹಿಂದೆ ಕಂಡುಬರುತಿದ್ದ ಸಂಪ್ರದಾಯ ಶೈಲಿಯ ವೇಷಭೂಷಣ ಹಾಗೂ ಕುಣಿತಗಳ ಸಹಿತ ನಡು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಬಯಲಾಟವೊಂದನ್ನು ಮಟಪಾಡಿಯ ಶ್ರೀನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ ನ.12ರ ಶನಿವಾರ ಮಟಪಾಡಿಯಲ್ಲಿ ಆಯೋಜಿಸಿದೆ ಎಂದು   ಕಲಾಮಂಡಳಿಯ ಗೌರವ ಸಲಹೆಗಾರರಾದ ಸರ್ಪು ಸದಾನಂದ ಪಾಟೀಲ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭವಿ ಕಲಾವಿದರು ರಾತ್ರಿ 8ಗಂಟೆಯಿಂದ ಮಟಪಾಡಿ-ಹಾರಾಡಿ ಸಾಂಪ್ರದಾಯಿಕ ಶೈಲಿಯಲ್ಲಿ  ಮಾಯಾಪುರಿ ಮಹಾತ್ಮೆ- ವೀರಮಣಿ ಕಾಳಗ, ಕರ್ಣಾರ್ಜುನ ಕಾಳಗ- ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರಸಂಗಗಳನ್ನು ಆಡಿತೋರಿಸಲಿದ್ದಾರೆ ಎಂದರು.

ಮಟಪಾಡಿಯಲ್ಲಿರುವ ಶ್ರೀನಂದಿಕೇಶ್ವರ ಯಕ್ಷಗಾನ ಕಲಾಮಂಡಳಿಯ ರಾಷ್ಟ್ರಪ್ರಶಸ್ತಿ ವಿಜೇತ, ಯಕ್ಷಗಾನ ಗುರು ಮಟಪಾಡಿ ವೀರಭದ್ರ ನಾಯಕ್ ರಂಗ ಮಂಟಪದಲ್ಲಿ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಬಡಗುತಿಟ್ಟಿನ ವಿವಿಧ ಮೇಳಗಳಲ್ಲಿ ದುಡಿಯುವ ಅನುಭವಿ ಕಲಾವಿದರು, ಹಿಮ್ಮೇಳದವರು ಇಲ್ಲಿ ತಮ್ಮ ಸಂಪ್ರದಾಯದ ಶೈಲಿಯ ಹಾಡುಗಾರಿಕೆ ಹಾಗೂ ಕುಣಿತ, ಅಭಿನಯವನ್ನು ಪ್ರದರ್ಶಿಸಲಿದ್ದಾರೆ.

ಇಂದಿನ ತಲೆಮಾರು ಅರಿಯದ ರಾಷ್ಟ್ರಪ್ರಶಸ್ತಿ ವಿಜೇತ ಹಾರಾಡಿ ರಾಮ ಗಾಣಿಗ, ಹಾರಾಡಿ ಕುಷ್ಟ ಗಾಣಿಗ, ಹಾರಾಡಿ ಮಹಾಬಲ ಗಾಣಿಗ ಮುಂತಾದವರ ಹಾರಾಡಿ ಶೈಲಿ ಹಾಗೂ ಮಟಪಾಡಿ ವೀರಭದ್ರ ನಾಯಕ್, ನಾರಾಯಣ ನಾಯಕ್, ಚಂದು ನಾಯಕ್, ಮುಕುಂದ ನಾಯಕ್ ಮುಂತಾದವರ ಮಟಪಾಡಿ ಶೈಲಿಯನ್ನು ಕಲಾವಿದರು ರಂಗದ ಮೇಲೆ ಮೂಡಿಸಲಿದ್ದಾರೆ ಎಂದರು.

ಅದೇ ರೀತಿ ಹಿಂದಿನ ಕಲಾವಿದರು ಬಳಸುತಿದ್ದ ವೇಷಭೂಷಣವನ್ನು ಮತ್ತೆ  ಇಲ್ಲಿ ಬಳಸಲಾಗುತ್ತಿದೆ. ಈಗಿನವರು ಬಳಸುವ ಥರ್ಮೋಕೋಲ್ ಕೇದಗೆ ಮುಂದಲೆ, ಮುಂಡಾಸು ಬದಲು ಹಿಂದಿನವರು ಬಳಸುತಿದ್ದ ಹುಲ್ಲಿನ ಅಟ್ಟೆಯ ಕೇದಗೆಮುಂದಲೆ, ಮುಂಡಾಸುಗಳನ್ನು, ಕಿರೀಟಗಳನ್ನು, ಭುಜಕೀರ್ತಿ, ಎದೆಕಟ್ಟು,  ವಡ್ಯಾಣಗಳನ್ನು ಮತ್ತೆ ಇಲ್ಲಿ ಕಲಾವಿದರು ಬಳಸಲಿದ್ದಾರೆ ಎಂದರು.

ಹೆರಂಜಾಲು ಗೋಪಾಲ ಗಾಣಿಗ, ಕಿಗ್ಗ ಹಿರಿಯಣ್ಮ ಆಚಾರ್ಯರಂಥ ಭಾಗವತರು, ರಾಮಕೃಷ್ಣ ಮಂದಾರ್ತಿ, ಶ್ರೀಕಾಂತ ಶೆಟ್ಟಿ ಎಡಮೊಗೆ ಮುಂತಾದ ಚಂಡೆವಾದಕರು, ಶ್ರೀಧರ ಭಂಡಾರಿ, ಎನ್.ಜಿ.ಹೆಗಡೆ ಮುಂತಾದ ಮದ್ದಲೆವಾ ದಕರು ಅಂದು ಇರಲಿದ್ದು, ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದ ಏರೋಡಿ ಗೋವಿಂದಪ್ಪ, ಹಾರಾಡಿ ಸರ್ವೋತ್ತಮ ಗಾಣಿಗ, ಕೋಡಿ ವಿಶ್ವನಾಥ ಗಾಣಿಗ, ಅಜ್ರಿ ಗೋಪಾಲ ಗಾಣಿಗ, ಹಾರಾಡಿ ರಮೇಶ್ ಗಾಣಿಗರಂಥ ಕಲಾವಿದರು ಬಣ್ಣ ಬಳಿದು ಸಾಂಪ್ರದಾಯಿಕ ಶೈಲಿಯ ಯಕ್ಷಗಾನವನ್ನು ಪ್ರದರ್ಶಿಸಲಿದ್ದಾರೆ ಎಂದರು.

1965ರಲ್ಲಿ ಸ್ಥಾಪನೆಗೊಂಡ ಶ್ರೀನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿಯ ಸದಸ್ಯರು ಮೊದಲು ಯಕ್ಷಗಾನದ ನಡೆದಾಡುವ ವಿಶ್ವಕೋಶವೆನಿಸಿದ್ದ ಪ್ರಸಿದ್ಧ ಯಕ್ಷಗುರು ತೋನ್ಸೆ ಕಾಂತಪ್ಪ ಮಾಸ್ತರ್ ಅವರ ನಿರ್ದೇಶನದಲ್ಲಿ ಅವರ ನಂತರ ಅವರ ಪುತ್ರ ಯಕ್ಷಗಾನ ಗುರು ತೋನ್ಸೆ ಜಯಂತಕುಮಾರ್ ನಿರ್ದೇಶನದಲ್ಲಿ ಪ್ರತಿವರ್ಷ ಸಂಪ್ರದಾಯಬದ್ಧ ಯಕ್ಷಗಾನ ಪ್ರದರ್ಶನ ನೀಡುತ್ತಿದೆ ಎಂದು ಪಾಟೀಲ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಗೌರವಾಧ್ಯಕ್ಷ ಚಂದ್ರಶೇಖರ ಕಲ್ಕೂರ, ಅಧ್ಯಕ್ಷ ಪ್ರಭಾಕರ ಆಚಾರ್ಯ, ಮಟಪಾಡಿ, ಮಾಜಿ ಅಧ್ಯಕ್ಷ ಸ್ಯಾಮ್ಸನ್ ಸಿಕ್ವೇರಾ, ಶರೂನ್ ಸಿಕ್ವೇರಾ ಹಾಗೂ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.

share
Next Story
X