ಉದ್ಯಾವರ: ನೆಹರೂ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆ

ಉದ್ಯಾವರ, ನ.8: ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನೆಹರೂ ಜಯಂತಿಯ ಪ್ರಯುಕ್ತ ಆಚರಿಸಲ್ಪಡುವ ಮಕ್ಕಳ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆ ನ.25ರ ಶುಕ್ರವಾರ ಬೆಳಗ್ಗೆ 9:30ರಿಂದ ಉದ್ಯಾವರ ಮೇಲ್ಪೇಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಶತಮಾ ನೋತ್ತರ ಸುವರ್ಣ ಸಂಭ್ರಮ ಸಭಾಭವನದಲ್ಲಿ ನಡೆಯಲಿದೆ.
ದೇಶದ ಸ್ವಾತಂತ್ರ್ಯ ಚಳವಳಿ ಹಿನ್ನಲೆಯಲ್ಲಿ ಹೆಚ್ವಿನ ಪ್ರಶ್ನೆಗಳಿರುತ್ತವೆ. ಸ್ಪರ್ಧೆ ಗಳು ಉಡುಪಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಟ್ಟದಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಜರಗುತ್ತದೆ. ಇಬ್ಬರು ವಿದ್ಯಾರ್ಥಿಗಳ ತಂಡದಂತೆ, ಪ್ರತಿ ಶಾಲೆಯಿಂದ ಗರಿಷ್ಠ ಮೂರು ತಂಡಗಳು ಭಾಗವಹಿಸಬಹುದಾಗಿದೆ.
ಆಸಕ್ತ ಶಾಲೆಗಳ ಮುಖ್ಯೋಪಾಧ್ಯಾಯರು ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ವಿವರಗಳನ್ನು ತಮ್ಮ ಸಹಿ ಮತ್ತು ಶಾಲಾ ಮೊಹರಿನೊಂದಿಗೆ ನ.19ರೊಳಗೆ ತಿಲಕರಾಜ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ, ಉದ್ಯಾವರ ಫ್ರೆಂಡ್ಸ್ ಸರ್ಕಲ್, ಉದ್ಯಾವರ - 574 118 ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ +919844812513 ಈ ಸಂಖ್ಯೆಗೆ ವಾಟ್ಸ್ಯಾಪ್ ಮೂಲಕ ಕಳುಹಿಸಿ ಕೊಡಬಹುದು.
ಪ್ರತಿ ವಿಭಾಗದಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 5000ರೂ, 3000ರೂ, 2000 ರೂ. ಹಾಗೂ 1000ರೂ.ನಗದು ಬಹುಮಾನ, ಸ್ಮರಣಿಕೆ ಮತ್ತು ದೃಡ ಪತ್ರವನ್ನು ನೀಡಲಾಗುವುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.







