ಕುಂಜಾರುಗಿರಿಯಲ್ಲಿ ಚಂದ್ರಗ್ರಹಣ ವೀಕ್ಷಣೆ

ಕಾಪು : ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕಕರ ಸಂಘದ ವತಿಯಿಂದ ಕುಂಜಾರುಗಿರಿಯ ದುರ್ಗಾ ದೇವಿ ದೇವಸ್ಥಾನದ ಬೆಟ್ಟದಲ್ಲಿ ಮಂಗಳವಾರ ಸಂಜೆ ಚಂದ್ರಗ್ರಹಣವನ್ನು ವಿಕ್ಷೀಸಲಾಯಿತು.
ಮೂರು ಟೆಲಿಸ್ಕೋಪ್ ಮೂಲಕ ಆಕಾಶ ವಿಕ್ಷಣೆ ಮಾಡಲಾಯಿತು. ಸಂಜೆ 6.15ರಿಂದ 6.20ರವರೆಗೆ ಪಾರ್ಶ್ವ ಚಂದ್ರಗ್ರಹಣ ಗೋಚರಿಸಿತು. ಇದರ ನೇರ ಪ್ರಸಾರವನ್ನು ಸಂಘದ ಯೂಟ್ಯೂಬ್ ಹಾಗೂ ಸ್ಥಳದಲ್ಲಿ ವ್ಯವಸ್ಥೆ ಮಾಡಿದ ಪ್ರೊಜೆಕ್ಟರ್ ಮೂಲಕ ತೋರಿಸಲಾಯಿತು.
ಉಡುಪಿ ಪಿಪಿಸಿ ಹಾಗೂ ಕುಂಜಾರುಗಿರಿಯ ಆನಂದ ತೀರ್ಥ ಪದವಿ ಪೂರ್ವ ಕಾಲೇಜಿನ ಸುಮಾರು 75 ವಿದ್ಯಾರ್ಥಿಗಳು ಚಂದ್ರಗ್ರಹಣವನ್ನು ವಿಕ್ಷಿಸಿ ದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಸಂಸ್ಥೆಯ ಆಡಳಿತಾಧಿಕಾರಿ ಡಾ.ಎ.ಪಿ.ಭಟ್, ಸಂಘದ ಅತುಲ್ ಭಟ್ ಉಪಸ್ಥಿತರಿದ್ದರು.
ಪರ್ಕಳದಲ್ಲೂ ವಿಕ್ಷಣೆ: ಪರ್ಕಳ ಹೋಟೆಲ್ ಸಂಧ್ಯಾ ವೈದ್ಯ ರೆಸ್ಟೋರೆಂಟ್‌ನ ಐದನೇ ಮಹಡಿಯಲ್ಲಿ ಮಣಿಪಾಲ ಎಂಐಟಿಯ ಉದ್ಯೋಗಿ ಆರ್. ಮನೋಹರ್ ಅವರ ಟೆಲಿಸ್ಕೋಪ್ ಮೂಲಕ ಇಂದು ಸಂಜೆ 6.25ರ ಸಮಯ ದಲ್ಲಿ ಚಂದ್ರಗ್ರಹಣವನ್ನು ವಿಕ್ಷೀಸಲಾಯಿತು.






