ರೈಲಿನಿಂದ ಆಯಾತಪ್ಪಿ ಬಿದ್ದ ಪ್ರಯಾಣಿಕನ ರಕ್ಷಣೆ

ಉಡುಪಿ: ರೈಲಿನಲ್ಲಿ ಇಳಿಯುತ್ತಿದ್ದ ವೇಳೆ ಆಯಾತಪ್ಪಿ ಬಿದ್ದ ಪ್ರಯಾಣಿಕ ರೊಬ್ಬರನ್ನು ರೈಲ್ವೇ ಸಿಬಂದಿ ರಕ್ಷಿಸಿರುವ ಘಟನೆ ಇಂದು ನಡೆದಿದೆ.
ಅಭಿಮನ್ಯು ಎಂಬವರು ಮುಂಬೈಯಿಂದ ಮಂಗಳೂರಿಗೆ ತೆರಳಲು ಟಿಕೆಟ್ ಮಾಡಿದ್ದರು. ಆದರೆ ಅಚಾತುರ್ಯ ದಿಂದ ಅವರು ಪಟ್ನಾ ವಾಸ್ಕೋ ರೈಲನ್ನು ಹತ್ತಿದ್ದರು. ಈ ಬಗ್ಗೆ ಕೂಡಲೇ ಅರಿವಿಗೆ ಬಂದ ಕಾರಣ ಅವರು ರೈಲು ಹೊರಡಲು ವೇಳೆ ಇಳಿಯಲು ಯತ್ನಿಸಿದರು.
ಇದರ ಪರಿಣಾಮ ಅವರು ಆಯತಪ್ಪಿ ಬಿದ್ದರೆನ್ನಲಾಗಿದೆ. ಕೂಡಲೇ ಅದೇ ಪ್ಲಾಟ್‌ಫಾರ್ಮ್‌ನಲ್ಲಿದ್ದ ಮಡಗಾಂವ್-ಮಂಗಳೂರು ರೈಲಿನ ಟಿಟಿಇ ಉದಯ್ ಎಂ.ನಾಯ್ಕ್ ಆತನನ್ನು ರಕ್ಷಿಸಿ ಸಂಭವ್ಯ ಅನಾಹುತವನ್ನು ತಪ್ಪಿಸಿದರು ಎಂದು ಕೊಂಕಣ ರೈಲ್ವೇಯ ಪಿಆರ್‌ಓ ಕೆ.ಸುಧಾಕೃಷ್ಣಮೂರ್ತಿ ತಿಳಿಸಿದ್ದಾರೆ.
Next Story





