ಶೇ.75ರಷ್ಟು ಮಹಿಳಾ ಪತ್ರಕರ್ತರು ಆನ್‌ಲೈನ್ ಹಿಂಸೆಯನ್ನು ಅನುಭವಿಸುತ್ತಿದ್ದಾರೆ: ವರದಿ
ಶೇ.18ರಷ್ಟು ಪತ್ರರ್ತೆಯರಿಗೆ ಲೈಂಗಿಕ ಹಿಂಸೆಯ ಬೆದರಿಕೆ

ಹೊಸದಿಲ್ಲಿ, ನ.8: ಇತ್ತೀಚಿನ ಅಧ್ಯಯನ ವೊಂದರಂತೆ ವಿಶ್ವಾದ್ಯಂತ ಹೆಚ್ಚಿನ ಮಹಿಳಾ ಪತ್ರಕರ್ತರು ಆನ್‌ಲೈನ್ ನಿಂದನೆ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಶೇ.25ರಷ್ಟು ಪತ್ರಕರ್ತೆಯರು ಜೀವ ಬೆದರಿಕೆಸೇರಿದಂತೆ ದೈಹಿಕ ದೌರ್ಜನ್ಯದ ಬೆದರಿಕೆಗಳನ್ನು ಸ್ವೀಕರಿಸಿದ್ದಾರೆ.
ಇವು ಯುನೆಸ್ಕೋ ಸಿದ್ಧಪಡಿಸಿರುವ ವರದಿಯಲ್ಲಿನ ಕೆಲವು ಆಘಾತಕಾರಿ ಅಂಶಗಳಾಗಿವೆ. ವರದಿಯು ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜರ್ನಲಿಸ್ಟ್ಸ್ ಮತ್ತು ಶೆಫೀಲ್ಡ್ ವಿವಿ ನಡೆಸಿರುವ ಸಂಶೋಧನೆಗಳನ್ನು ನೆಚ್ಚಿಕೊಂಡಿದೆ. ಮೂರು ವರ್ಷಗಳ ಅವಧಿಯಲ್ಲಿ 15 ದೇಶಗಳ ಒಂದು ಸಾವಿರಕ್ಕೂ ಅಧಿಕ ಪತ್ರಕರ್ತೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.18ರಷ್ಟು ಪತ್ರಕರ್ತೆಯರು ಲೈಂಗಿಕ ಹಿಂಸೆಯ ಬೆದರಿಕೆಯನ್ನು ಸ್ವೀಕರಿಸಿದ್ದರೆ, ಶೇ.13ರಷ್ಟು ಪತ್ರಕರ್ತೆಯರು ಮಕ್ಕಳು ಮತ್ತು ಶಿಶುಗಳು ಸೇರಿದಂತೆ ತಮಗೆ ಹತ್ತಿರದವರ ವಿರುದ್ಧ ಹಿಂಸೆಯ ಬೆದರಿಕೆಗಳನ್ನು ಪಡೆದಿದ್ದರು. ಅನಪೇಕ್ಷಿತ ಖಾಸಗಿ ಸಾಮಾಜಿಕ ಮಾಧ್ಯಮ ಸಂದೇಶಗಳಿಂದ ತಾವು ಕಿರುಕುಳಕ್ಕೊಳಗಾಗಿದ್ದೇವೆ ಎಂದು ಶೇ.48ರಷ್ಟು ಪತ್ರಕರ್ತೆಯರು ತಿಳಿಸಿದ್ದಾರೆ.
ಶೇ.75ರಷ್ಟು ಪತ್ರಕರ್ತೆಯರು ಒಂದಲ್ಲ ಒಂದು ರೂಪದಲ್ಲಿ ಆನ್‌ಲೈನ್ ಹಿಂಸೆಯನ್ನು ಅನುಭವಿಸಿದ್ದರೆ, ಶೇ.15ರಷ್ಟು ಪತ್ರಕರ್ತೆಯರು ತಿರುಚಲ್ಪಟ್ಟ ಫೋಟೊಗಳು ಅಥವಾ ವೀಡಿಯೊಗಳು,ಕದ್ದ ಚಿತ್ರಗಳುಮತ್ತು ಅನುಮತಿಯಿಲ್ಲದೆ ಸಾರ್ವಜನಿಕವಾಗಿ ಹಂಚಿಕೊಳ್ಳಲಾದ ಫೋಟೊಗಳಂತಹ ‘ಚಿತ್ರ ಆಧಾರಿತ’ನಿಂದನೆಯನ್ನು ಎದುರಿಸಿದ್ದಾರೆ.
ಮಹಿಳೆಯರ ವಿರುದ್ಧ ದ್ವೇಷವನ್ನು ಹುಟ್ಟುಹಾಕುವ ಅಲ್ಗರಿದಮ್‌ಗಳನ್ನು ಕೂಲಂಕಶವಾಗಿ ಪರಿಶೀಲಿಸುವಂತೆ ಹಾಗೂ ಲಿಂಗಾಧಾರಿತ ಆನ್‌ಲೈನ್ ಹಿಂಸಾಚಾರದ ಅಪರಾಧಿಗಳನ್ನು ವೇದಿಕೆಯಿಂದ ಹೊರಹಾಕುವಂತೆ ಮತ್ತು ದಂಡಿಸುವಂತೆ ವರದಿಯು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆಕರೆ ನೀಡಿದೆ. ವರದಿ ಯುಇದನ್ನು ‘ಮಹಿಳಾ ಪತ್ರಕರ್ತರವಿರುದ್ಧ ಆನ್‌ಲೈನ್ ಹಿಂಸಾಚಾರದ ಬಿಕ್ಕಟ್ಟು ’ಎಂದು ಬಣ್ಣಿಸಿದೆ. ಉದಾಹರಣೆಗೆ ಫೇಸ್‌ಬುಕ್-ಕ್ಯಾಂಬ್ರಿಡ್ಜ್ ಅನಲಿಟಿಕಾಡಾಟಾಹಗರಣವನ್ನು ಬಯಲಿಗೆಳೆದಿದ್ದ ಪತ್ರಕರ್ತರಲ್ಲಿ ಓರ್ವರಾಗಿದ್ದ ‘ಗಾರ್ಡಿಯನ್ ’ನ ಕ್ಯಾರೋಲ್ ಕ್ಯಾಡ್‌ವಲಡ್ರ್ ಅವರು 2019 ಡಿಸೆಂಬರ್ ಮತ್ತು 2021 ಜನವರಿ ನಡುವೆ ‘ಸ್ಪಷ್ಟ ನಿಂದನೆ ’ಯ 10,400 ಘಟನೆಗಳ ಗುರಿಯಾಗಿದ್ದರು.
ಪತ್ರಕರ್ತರಹಂತಕರು ಯಾವುದೇಶಿಕ್ಷೆಯಿಲ್ಲದೆ ಪಾರಾಗುವ ವಿಶ್ವದ 12 ದೇಶಗಳಲ್ಲಿ ಭಾರತವೂಒಂದಾಗಿದೆಎನ್ನುವುದನ್ನು ನೆನಪಿನಲ್ಲಿಡಬೇಕು. 2021ರ ವರದಿಯಂತೆಕಳೆದ 10 ವರ್ಷಗಳಲ್ಲಿಯಾರನ್ನೂ ಹೊಣೆಯಾಗಿಸಲಾಗದ ಪತ್ರಕರ್ತರಹತ್ಯೆಗಳ ಶೇ.81ರಷ್ಟು ಪಾಲು ಈ 12 ದೇಶಗಳದ್ದಾಗಿದೆ.







