ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ: ಆರೋಪಿಯ ಬಂಧನ

ಮಡಿಕೇರಿ ನ.8 : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಓರ್ವ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯ ಕಾಸರಗೋಡು ಮೂಲದ ಆರೋಪಿ ಎಂ.ಹೆಚ್. ಶ್ರೀನಾಥ್(45) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಬಾಲಂಬಿ ಗ್ರಾಮ, ಎಂ.ಚೆಂಬು ನಿವಾಸಿ ಜೇಮ್ಸ್ ಜೋಸೆಫ್(24) ಎಂಬುವವರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 4 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದ ಶ್ರೀನಾಥ್, ಮುಂಗಡವಾಗಿ 1.50 ಲಕ್ಷ ರೂ.ಗಳನ್ನು 2021 ರಲ್ಲಿ ಪಡೆದಿದ್ದ. ಆದರೆ ಹಣ ನೀಡಿ ವರ್ಷ ತುಂಬುತ್ತಾ ಬಂದರೂ ವಿಸಾ ಮತ್ತು ಉದ್ಯೋಗ ಸಿಗದೇ ಇದ್ದಾಗ ಸಂಶಯಗೊಂಡ ಜೇಮ್ಸ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು ಶ್ರೀನಾಥ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. 60 ಕ್ಕೂ ಹೆಚ್ಚು ಯುವಕರಿಗೆ ಈತ ವಂಚನೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
Next Story





