ಕುರಿಗಾಹಿಗಳಿಗೆ ತಲಾ 20 ಕುರಿ, 1 ಮೇಕೆ ಉಚಿತ ನೀಡುವ ಯೋಜನೆಗೆ ಶೀಘ್ರ ಚಾಲನೆ: ಸಿಎಂ ಬೊಮ್ಮಾಯಿ
![ಕುರಿಗಾಹಿಗಳಿಗೆ ತಲಾ 20 ಕುರಿ, 1 ಮೇಕೆ ಉಚಿತ ನೀಡುವ ಯೋಜನೆಗೆ ಶೀಘ್ರ ಚಾಲನೆ: ಸಿಎಂ ಬೊಮ್ಮಾಯಿ ಕುರಿಗಾಹಿಗಳಿಗೆ ತಲಾ 20 ಕುರಿ, 1 ಮೇಕೆ ಉಚಿತ ನೀಡುವ ಯೋಜನೆಗೆ ಶೀಘ್ರ ಚಾಲನೆ: ಸಿಎಂ ಬೊಮ್ಮಾಯಿ](https://www.varthabharati.in/sites/default/files/images/articles/2022/11/9/355770-1667976060.jpg)
ಬೆಂಗಳೂರು: 'ಪ್ರತಿಯೊಬ್ಬ ಕುರಿಗಾರರರಿಗೂ 20 ಕುರಿ, ಒಂದು ಮೇಕೆಯನ್ನು ನೀಡುವ ಮೂಲಕ ಕುರಿಗಾರರ ಕುಟುಂಬ ಸ್ವಾವಲಂಬಿ ಬದುಕು ನಡೆಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಮಂಗಳವಾರ ಹಾವೇರಿಯ ಬ್ಯಾಡಗಿಯಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ''ರಾಜ್ಯದ ಪ್ರತಿಯೊಬ್ಬ ಕುರಿಗಾಹಿಯು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು, ಎಲ್ಲಾ ಕುರಿಗಾಹಿಗಳಿಗೆ ತಲಾ 20 ಕುರಿ ಹಾಗೂ 1 ಮೇಕೆಯನ್ನು ಉಚಿತವಾಗಿ ನೀಡುವ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು. ಈ ಯೋಜನೆಗಾಗಿ ₹324 ಕೋಟಿಯನ್ನು ಮೀಸಲಿರಿಸಲಾಗಿದೆ." ಎಂದು ತಿಳಿಸಿದ್ದಾರೆ.
"ರಾಜ್ಯದ ಪ್ರತಿಯೊಬ್ಬ ಕುರಿಗಾಹಿಯು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು, ಎಲ್ಲಾ ಕುರಿಗಾಹಿಗಳಿಗೆ ತಲಾ 20 ಕುರಿ ಹಾಗೂ 1 ಮೇಕೆಯನ್ನು ಉಚಿತವಾಗಿ ನೀಡುವ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು. ಈ ಯೋಜನೆಗಾಗಿ ₹324 ಕೋಟಿಯನ್ನು ಮೀಸಲಿರಿಸಲಾಗಿದೆ." ಮುಖ್ಯಮಂತ್ರಿ: @BSBommai pic.twitter.com/6fRVF9NknU
— CM of Karnataka (@CMofKarnataka) November 9, 2022