ಟಿ .ಬಿ. ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿದ ಉಳ್ಳಾಲ ದರ್ಗಾ

ಉಳ್ಳಾಲ: ಉಳ್ಳಾಲ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಯ ಸಹಯೋಗದಲ್ಲಿ 12 ಟಿ.ಬಿ . ರೋಗಿಗಳಿಗೆ ಮಾಸಿಕ ಪೌಷ್ಟಿಕಾಂಶಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಬುಧವಾರ ದರ್ಗಾ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಕ್ಷಯ ರೋಗ ಮತ್ತದರ ಪರಿಹಾರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ, ಪ್ರಧಾನ ಮಂತ್ರಿ ಅಭಿಯಾನದ ಬಗ್ಗೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳ ಕೋರಿಕೆ ಮೇರೆಗೆ 12 ರೋಗಿಗಳಿಗೆ ಮಾಸಿಕ ಪೌಷ್ಟಿಕಾಂಶ ಗಳ ಕಿಟ್ ವಿತರಣೆ ಮಾಡಲಾಗುವುದು ಎಂದರು.
ಜಿಲ್ಲೆ ಯಲ್ಲಿ 1,046 ಟಿ.ಬಿ. ರೋಗಿಗಳು ಇರುವುದು ಖೇದಕರ.ಈ ರೋಗಿಗಳ ರೋಗ ಶಮನಕ್ಕೆ ವಿವಿಧ ಸಂಘ ಸಂಸ್ಥೆಗಳು ಆಹಾರ ನೀಡುವ ಮೂಲಕ ಗುಣಮುಖರಾಗಲು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಉಳ್ಳಾಲ ಪರಿಸರದಲ್ಲಿ ಸಹಸ್ರಾರು ವಿಧವೆಯರು, ವೃದ್ಧರು ಅನೇಕ ಮಾರಕ ಖಾಯಿಲೆಯಿಂದ ಬಳಲುತ್ತಿರುವುದನ್ನು ನನ್ನ ಅಧಿಕಾರ ಅವಧಿಯಲ್ಲಿ ಕಾಣಲು ಸಾಧ್ಯವಾಗಿದೆ. ದರ್ಗಾ ವತಿಯಿಂದ ತಕ್ಕ ಮಟ್ಟಿನ ಸಹಕಾರ ನೀಡಲಾಗಿದೆ. ಶ್ರೀಮಂತರು, ಸ್ಥಿತಿ ವಂತರು ಈ ಖಾತೆಗೆ ತಮ್ಮ ದಾನ ನೀಡುವುದರ ಮೂಲಕ ವಿಧವೆ, ವೃದ್ಧರ ಪಾಲಿಗೆ ಆಶಾಕಿರಣ ವಾಗಬೇಕುಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿ ನಟೇಶ್, ದರ್ಗಾ ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು ಟಿ ಇಲ್ಯಾಸ್, ಸದಸ್ಯ ಆಲಿಮೋನು , ಫಾರೂಕ್ ಉಳ್ಳಾಲ್ ಉಪಸ್ಥಿತರಿದ್ದರು.