ಸುಳ್ಯ: ಹೊಳೆಗೆ ಬಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಮೃತ್ಯು

ಸುಳ್ಯ: ಅರಣ್ಯ ಇಲಖೆಯ ಸಿಬ್ಬಂದಿಯೋರ್ವರು ಕರ್ತವ್ಯದಲ್ಲಿದ್ದಾಗಲೇ ಆಯತಪ್ಪಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ತೊಡಿಕಾನ ಸಮೀಪದ ಮಾವಿನಕಟ್ಟೆಯ ನರುವೊಳು ಮೊಟ್ಟೆ ಬಳಿ ನಡೆದಿದೆ.
ಮೃತರನ್ನು ಶುಂಠಿಕೊಪ್ಪದ ಫಾರೆಸ್ಟ್ ವಾಚರ್ ಚಿನ್ನಪ್ಪ (58) ಎಂದು ಗುರುತಿಸಲಾಗಿದೆ.
ಕೊಡಗು ಅರಣ್ಯ ಇಲಾಖೆಯಿಂದ ಭೂಮಿಯ ಸರ್ವೆಗೆ ಹೋದ ಸಂದರ್ಭ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳು ಮೊಟ್ಟೆ ಎಂಬಲ್ಲಿ ಹೊಳೆ ಬದಿಯಲ್ಲಿ ನೀರು ಕುಡಿಯಲು ಪ್ರಯತ್ನಿಸುತ್ತಿದ್ದಾಗ ಮೇಲಿನಿಂದ ಬಿದ್ದು ದುರಂತ ಸಂಭವಿಸಿದೆ. ಸ್ಥಳಕ್ಕೆ ಕುಟುಂಬದವರು ಮತ್ತು ಪೊಲೀಸರು ಬಂದ ಬಳಿಕ ಮೃತದೇಹವನ್ನು ಸ್ಥಳಾಂತರ ಮಾಡಲಾಯಿತು. ಭಾಗಮಂಡಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
Next Story