ಕಾಂಗ್ರೆಸ್‌ನ ಭಾರತ ಜೋಡೊ ಯಾತ್ರೆಯನ್ನು ಸೇರಲಿರುವ ಶರದ ಪವಾರ್,ಆದಿತ್ಯ ಠಾಕ್ರೆ

ಮುಂಬೈ,ನ.9: ಎನ್‌ಸಿಪಿ ವರಿಷ್ಠ ಶರದ ಪವಾರ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ನ.11ರಂದು ಕಾಂಗ್ರೆಸ್‌ನ ಭಾರತ ಜೋಡೊ ಯಾತ್ರೆಯನ್ನು ಸೇರಲಿದ್ದಾರೆ ಎಂದು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಅಶೋಕ ಚವಾಣ ಅವರು ಬುಧವಾರ ಇಲ್ಲಿ ತಿಳಿಸಿದರು.ಎನ್‌ಸಿಪಿಯ ಜಯಂತ ಪಾಟೀಲ,ಸುಪ್ರಿಯಾ ಸುಲೆ ಮತ್ತು ಜಿತೇಂದ್ರ ಅವ್ಹಾಡ್ ಅವರು ಗುರುವಾರ ಯಾತ್ರೆಯನ್ನು ಸೇರಲಿದ್ದಾರೆ ಎಂದೂ ಅವರು ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಗುರುವಾರ ಭಾರತ ಜೋಡೊ ಯಾತ್ರೆಯನ್ನು ಸೇರಿಕೊಳ್ಳಲಿದ್ದಾರೆ ಎಂದರು.ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ಯಾತ್ರೆ ಸೋಮವಾರ ಸಂಜೆ ಮಹಾರಾಷ್ಟ್ರವನ್ನು ಪ್ರವೇಶಿಸಿದೆ. 15 ದಿನಗಳಲ್ಲಿ ರಾಜ್ಯದ 15 ವಿಧಾನಸಭಾ ಮತ್ತು ಆರು ಲೋಕಸಭಾ ಕ್ಷೇತ್ರಗಳ ಮೂಲಕ ಸಾಗಲಿರುವ ಯಾತ್ರೆಯು 382 ಕಿ.ಮೀ.ದೂರವನ್ನು ಕ್ರಮಿಸಲಿದೆ.
Next Story





