ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್: ಭಾರತ ವಿರುದ್ಧ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ
![ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್: ಭಾರತ ವಿರುದ್ಧ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್: ಭಾರತ ವಿರುದ್ಧ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ](https://www.varthabharati.in/sites/default/files/images/articles/2022/11/10/355889-1668066660.jpg)
ಅಡಿಲೇಡ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಗುರುವಾರ ಭಾರತದ ವಿರುದ್ಧ ಟಾಸ್ ಜಯಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಇಂಗ್ಲೆಂಡ್ ನ ಮಾರ್ಕ್ ವುಡ್ ಹಾಗೂ ಡೇವಿಡ್ ಮಲಾನ್ ಗಾಯಗೊಂಡಿದ್ದಾರೆ. ಈ ಇಬ್ಬರ ಬದಲಿಗೆ ಕ್ರಿಸ್ ಜೋರ್ಡಾನ್ ಹಾಗೂ ಫಿಲ್ ಸಾಲ್ಟ್ ಆಯ್ಕೆಯಾಗಿದ್ದಾರೆ.
ದಿನೇಶ್ ಕಾರ್ತಿಕ್ ಅವರ ಫಿನಿಶಿಂಗ್ ಕೌಶಲ್ಯಕ್ಕಿಂತ ಎಡಗೈ ಬ್ಯಾಟರ್ ರಿಷಭ್ ಪಂತ್ ಗೆ ಭಾರತ ಆದ್ಯತೆ ನೀಡಿದೆ.
Next Story