ನ.12-13: ರೋಟರಿ ಕ್ಲಬ್‌ನಿಂದ 'ಸಮರ್ಪಣಾ 2022'
ಮಂಗಳೂರು, ನ.10: ರೋಟರಿ ಕ್ಲಬ್ ಮಂಗಳೂರು ಪೂರ್ವ ವತಿಯಿಂದ 'ಸಮರ್ಪಣಾ 2022' ಎಂಬ ವಿಶೇಷ ವಿಚಾರ ಸಂಕಿರಣ ನ. 12 ಹಾಗೂ 13ರಂದು ಅಡ್ಯಾರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಎನ್. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೊದಲ ದಿನ ಅಪರಾಹ್ನ 3:30ರಿಂದ ಹಾಗೂ ಮರುದಿನ ಬೆಳಗ್ಗೆ 9:30ರಿಂದ ಕಾರ್ಯಕ್ರಮ ಆರಂಭವಾಗಲಿದೆ. ಟಿಆರ್‌ಎಫ್ ಟ್ರಸ್ಟಿ ಭರತ್ ಪಾಂಡ್ಯ ಉದ್ಘಾಟಿಸಲಿದ್ದಾರೆ. ಶಾಸಕ ಡಾ.ವೈ. ಭರತ್ ಶೆಟ್ಟಿ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ವಿದ್ವಾನ್ ಜೆ.ಎಸ್.ನಟೇಶ್ 'ಸಮಾಜ ಸೇವೆ ಹಾಗೂ ಮಂಕುತಿಮ್ಮನ ಕಗ್ಗ' ವಿಚಾರದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಪಲ್ಸ್ ಪೋಲಿಯೊ ವಿಷಯದ ವಿಶೇಷ ಕಾರ್ಯಾಗಾರವನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದಜಿ ಉದ್ಘಾಟಿಸಲಿದ್ದಾರೆ. ಡಿಎಚ್‌ಒ ಡಾ.ಕಿಶೋರ್ ಕುಮಾರ್ 'ಪೋಲಿಯೊ ಮುಕ್ತ ಸಮಾಜಕ್ಕೆ ರೋಟರಿಯ ಪಾತ್ರ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಪ್ರಮುಖರಾದ ಬಾಲಕೃಷ್ಣ ಹಾಗೂ ಕೃಷ್ಣ ಕೆ.ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ. ನಾರಾಯಣ ಎಚ್.ಸಿ., ವಲಯ ಆರ್‌ಟಿಎನ್ ಬಾಲಕೃಷ್ಣ ಶೆಟ್ಟಿ, ಸೆಮಿನಾರ್ ಚೇರ್‌ಮೆನ್ ಸಿಎ ಶಾಂತರಾಮ ಶೆಟ್ಟಿ, ಸೆಮಿನಾರ್ ಕಾರ್ಯದರ್ಶಿ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.







