ತ್ಯಾಜ್ಯ ಸಂಗ್ರಹಿಸುವವರ ಮನೆ ಪುನಃ ನಿರ್ಮಿಸಿಕೊಟ್ಟ ಎಪಿಡಿ ಪ್ರತಿಷ್ಠಾನ

ಮಂಗಳೂರು: ನಗರದಲ್ಲಿ ತ್ಯಾಜ್ಯ ಸಂಗ್ರಹಿಸುವ ಕುಟುಂಬವೊಂದರ ಪಾಳುಬಿದ್ದ ಮನೆಯನ್ನು ಮಂಗಳೂರಿನ ಎಪಿಡಿ ಪ್ರತಿಷ್ಠಾನ ಮತ್ತು ವೆಬ್‌ನ್ಯೂಸ್ ಪೋರ್ಟಲ್ ಮಂಗಳೂರು ಮೇರಿ ಜಾನ್ ಜಂಟಿಯಾಗಿ ಪುನಃ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ.
ನಗರದ ಪಚ್ಚನಾಡಿ ನಿವಾಸಿ ಮಂಗಳಾ ಅವರ ಮನೆಯು ಕಳೆದ ಮಳೆಗಾಲಕ್ಕೆ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಎಪಿಡಿ ಪ್ರತಿಷ್ಠಾನದ ಮುಖ್ಯಸ್ಥರು ಮಂಗಳೂರು ಮೇರಿ ಜಾನ್ ಸಹಕಾರದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ.
ಎಪಿಡಿ ಸಂಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್, ಪ್ರತಿಷ್ಠಾನದ ಸಂಯೋಜಕಿ ಗೀತಾ ಸೂರ್ಯ ಮತ್ತಿತರರು ಈ ಸಂದರ್ಭ ಹಾಜರಿದ್ದರು.
Next Story