ಕಾಪು ಕಾಂಗ್ರೆಸ್ ಸಮಿತಿ: ವಿವಿಧ ಘಟಕಗಳ ಪದಗ್ರಹಣ ಸಮಾರಂಭ

ಹಿರಿಯಡ್ಕ: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ಇದರ ಆಶ್ರಯದಲ್ಲಿ ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ಹಿರಿಯಡ್ಕ ಕೊಟ್ನಕಟ್ಟೆಯ ಸುರಭಿ ಸಭಾಂಗಣದಲ್ಲಿ ನೆರವೇರಿತು.
ಸಮಾರಂಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಸಮಿತಿ, ಕಾಪು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ ಸಮಿತಿ, ಕಾಪು ಬ್ಲಾಕ್ ಕಾಂಗ್ರೆಸ್ ಇಂಟಕ್ ಸಮಿತಿ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ ಆರ್‌ಜಿಪಿಆರ್‌ಎಸ್ ಸಮಿತಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಮಾಜಿ ಸಚಿವ ವಿನಯ್ ಕುಮಾರ ಸೊರಕೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಕೆಪಿಸಿಸಿ ಸಂಯೋಜಕ ಹರೀಶ್ ಕಿಣಿ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಆರ್‌ಜಿಪಿಆರ್‌ಎಸ್‌ನ ರಾಜ್ಯ ಉಪಾಧ್ಯಕ್ಷೆ ರೋಶನಿ ಒಲಿವರ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಂತೋಷ್ ಕುಲಾಲ್, ನಾಗೇಶ್ ಕುಮಾರ್ ಉದ್ಯಾವರ, ನವೀನ್ ಸಾಲ್ಯಾನ್, ದಿಲೀಪ್ ಹೆಗ್ಡೆ, ರೋಷನ್ ಶೆಟ್ಟಿ, ಚರಣ್ ವಿಠಲ್, ಗುರುದಾಸ್ ಭಂಡಾರಿ, ಸಂಧ್ಯಾ ಶೆಟ್ಟಿ, ಲಕ್ಷ್ಮಿ ನಾಯ್ಕ, ನಿತಿನ್ ಶೆಟ್ಟಿ, ಶೇಖರ್ ಕೋಟ್ಯಾನ್, ಗ್ರಾಮಿಣ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಶೆಟ್ಟಿ ತಂಗಣ, ಪ್ರಸಾದ್ ಮಣಿಪುರ, ಪ್ರವೀಣ್ ಪೂಜಾರಿ, ಸಂತೋಷ್ ಶೆಟ್ಟಿ, ರವೀಂದ್ರ ಪೂಜಾರಿ, ದಿನೇಶ್ ಪೂಜಾರಿ, ಸುಧಾಕರ ಪೂಜಾರಿ, ಕಿರಣ್ ಕುಮಾರ ಹೆಗ್ಡೆ, ಅಮರ ಕುಲಾಲ್, ಮಾಲತಿ ಆಚಾರ್ಯ, ರಫೀಕ್ ಪುತ್ತಿಗೆ, ಅಮೃತ ಅಲೆವೂರು, ರಾಜು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಮುಂಚೂಣಿ ಘಟಕಗಳ ಅಧ್ಯಕ್ಷರಾದ ಶಶಿಧರ ಜತ್ತನ್, ಉಮೇಶ್ ಕಾಂಚನ್, ಸುಧೀರ್ ನಾಯಕ್ ಪಟ್ಲ, ಸಂತೆಕಟ್ಟೆ ರಾಮದಾಸ್ ನಾಯ್ಕ್, ರಾಜು ಪೂಜಾರಿ, ಪ್ರಶಾಂತ್ ಕುಮಾರ್ ಹಿರಿಯಡ್ಕ, ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ -ಕಿರಿಯ ನಾಯಕರು, ಬ್ಲಾಕ್ ಸಮಿತಿ ಪದಾಧಿಕಾರಿಗಳು, ವಿವಿಧ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.
ಲಕ್ಷ್ಮೀನಾರಾಯಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.







