ಬೆಳ್ತಂಗಡಿ: ದಾರುಸ್ಸಲಾಮ್ ವಾರ್ಷಿಕೋತ್ಸವ, ಶೈಖುನಾ ಶಂಸುಲ್ ಉಲಮಾ ಆಂಡ್ ನೇರ್ಚೆ ಕಾರ್ಯಕ್ರಮ

ಬೆಳ್ತಂಗಡಿ : ದಾರುಸ್ಸಲಾಂ ಬೆಳ್ತಂಗಡಿ ಇದರ 6ನೇ ವಾರ್ಷಿಕೋತ್ಸವ ಹಾಗೂ ಶೈಖುನಾ ಶಂಸುಲ್ ಉಲಮಾ ಆಂಡ್ ನೇರ್ಚೆ ಇದರ ಉದ್ಘಾಟನೆಯು ಶರೀಫ್ ಫೈಝಿ ಕಡಬ ಇವರ ನೇತೃತ್ವದಲ್ಲಿ ಖಿಲ್ರ್ ಜುಮುಆಃ ಮಸ್ಜಿದ್ ನಲ್ಲಿ ನಡೆಯಿತು.
ಉದ್ಘಾಟನೆಯನ್ನು ಪಾಣಕ್ಕಾಡ್ ರಶೀದ್ ಅಲೀ ಶಿಹಾಬ್ ತಂಙಳ್ ನೆರವೇರಿಸಿದರು. ಸಯ್ಯಿದ್ ಜಿಫ್ರಿ ಕುಂಞಿ ಸೀದಿಕೋಯ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಾದಾತುಗಳು, ಉಲಮಾ ಉಮರಾ ನಾಯಕರು ದಾರುಸ್ಸಲಾಂ ಹಾಗೂ ಖಿಲ್ರ್ ಜುಮುಆಃ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಹಲವಾರು ಗಣ್ಯರು ಭಾಗವಹಿಸಿದ್ದರು.
ವಾರ್ಷಿಕ ಸಮ್ಮೆಳನವು ನವೆಂಬರ್ 13 ರ ವರೆಗೆ ನಡೆಯಲಿದೆ. ನ. 11ರಂದು ಸ್ವಲಾತ್ ಮಜ್ಲಿಸ್, ನ.12 ರಂದು ಬೆಳಗ್ಗೆ ಆದರ್ಶ ಅಧ್ಯಯನ ಶಿಬಿರ, ಮಗ್ರಿಬ್ ನಮಾಝ್ ಬಳಿಕ ಧಾರ್ಮಿಕ ಪ್ರವಚನ, ನ. 13 ರಂದು ಬೆಳಿಗ್ಗೆ 9:30ಕ್ಕೆ ಶಂಸುಲ್ ಉಲಮಾ (ಖ.ಸಿ) ಆಂಡ್ ನೇರ್ಚೆ, ಮಗ್ರಿಬ್ ನಮಾಝಿನ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಹಲವಾರು ಸಾದಾತುಗಳು ಉಲಮಾ-ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story