ಬ್ರಿಟನ್: ಮಿಲಿಟರಿ ಸಿಬ್ಬಂದಿಗಳಿಗೆ ಸಿಖ್ ಪ್ರಾರ್ಥನಾ ಪುಸ್ತಕ ಪೂರೈಕೆ

ಲಂಡನ್, ನ.10: 100 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಬ್ರಿಟಿಷ್ ಸೇನೆಯಲ್ಲಿರುವ ಸಿಖ್(Sikh) ಸಿಬಂದಿಗಳಿಗೆ ಸಿಖ್ ಪ್ರಾರ್ಥನಾ ಪುಸ್ತಕ ಒದಗಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
`ನಿತ್ಯನಾಮ್ ಗುಟಕ' (``Nityanam Gutaka'')ಎಂಬ ಪ್ರಾರ್ಥನಾ ಪುಸ್ತಕವನ್ನು ಬ್ರಿಟನ್ ರಕ್ಷಣಾ ಪಡೆಯ ಸಿಖ್ ನೆಟ್ವರ್ಕ್ ಒದಗಿಸಿದ್ದು ಇದನ್ನು 3 ಭಾಷೆಗಳಲ್ಲಿ ಮುದ್ರಿಸಲಾಗಿದೆ. ಸಿಖ್ ಜನರ ನಂಬಿಕೆ ಮತ್ತು ಸಂಪ್ರದಾಯವನ್ನು ಬೆಂಬಲಿಸುವ ನೇರ ಕ್ರಮ ಇದಾಗಿದೆ ಎಂದು ಬ್ರಿಟನ್ನ ರಕ್ಷಣಾ ಇಲಾಖೆ ಹೇಳಿದೆ.
ಸಿಖ್ ಸಮುದಾಯದವರಿಗೆ ಈ ಪುಸ್ತಕದಲ್ಲಿರುವುದು ಕೇವಲ ಪದಗಳಲ್ಲ, ಅವು ನಮ್ಮ ಗುರುಗಳ ಜೀವಂತ ಸಾಕಾರವಾಗಿದೆ. ಇದರಿಂದ ನಾವು ನೈತಿಕ ಮತ್ತು ದೈಹಿಕ ಶಕ್ತಿಯನ್ನು ಪಡೆಯುತ್ತೇವೆ ಮತ್ತು ಅದು ನಮಗೆ ಶಿಸ್ತನ್ನು ಕಲಿಸಿ ಆಧ್ಯಾತ್ಮಿಕವಾಗಿ ಬೆಳೆಸುತ್ತದೆ ಎಂದು ಬ್ರಿಟನ್ ಸೇನೆಯ ಮೇಜರ್ ದಲ್ಜೀಂದರ್ ಸಿಂಗ್ ವಿರ್ದೀ (Daljinder Singh Virdee)ಹೇಳಿದ್ದಾರೆ.
Next Story