ಟ್ವಿಟರ್ ದಿವಾಳಿಯಾಗಬಹುದೆಂಬ ಸುಳಿವು ನೀಡಿದ ಎಲಾನ್ ಮಸ್ಕ್
ಸ್ಯಾನ್ ಫ್ರಾನ್ಸಿಸ್ಕೋ: ತಮ್ಮ ಒಡೆತನದಲ್ಲಿರುವ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ (Twitter) ದಿವಾಳಿಯಾಗುವ ಸಾಧ್ಯತೆಯಿದೆಯೆನ್ನುವ ಸುಳಿವನ್ನು ಎಲಾನ್ ಮಸ್ಕ್ (Elon Musk) ಗುರುವಾರ ನೀಡಿದ್ದಾರೆ.
ಟ್ವಿಟರ್ ಅನ್ನು ಮಸ್ಕ್ ಅವರು 44 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಿರುವುದು ಟ್ವಿಟರ್‌ನ ಆರ್ಥಿಕತೆಯನ್ನು ಗಂಭೀರವಾಗಿಸಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭವಿಷ್ಯದ ನಾಯಕರೆಂದು ತಿಳಿಯಲಾದ ಹಲವಾರು ಹಿರಿಯ ಅಧಿಕಾರಿಗಳು ಟ್ವಿಟರ್ ಅನ್ನು ತೊರೆದಿರುವುದೂ ಸಂಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಜಾಹೀರಾತುದಾರರ ಕಳವಳವನ್ನು ದೂರವಾಗಿಸಲು ಮಸ್ಕ್ ಅವರು ಬುಧವಾರ ನಡೆಸಿದ್ದ ಟ್ವಿಟರ್ ಚಾಟ್ ಒಂದನ್ನು ಮಾಡರೇಟ್ ಮಾಡಿದ್ದ ಯೋಯೆಲ್ ರೊತ್ ಮತ್ತು ರಾಬಿನ್ ವೀಲರ್ ಎಂಬ ಇಬ್ಬರು ಅಧಿಕಾರಿಗಳ ಪೈಕಿ ಒಬ್ಬರು ಸಂಸ್ಥೆಯನ್ನು ತೊರೆದಿದ್ದಾರೆ.
ತಾವು ಸಂಸ್ಥೆಯನ್ನು ತೊರೆದಿರುವ ಕುರಿತು ಗುರುವಾರ ಟ್ವಿಟರ್‌ನ ಮುಖ್ಯ ಸೆಕ್ಯುರಿಟಿ ಆಫೀಸರ್ ಲಿಯಾ ಕಿಸ್ಸ್ನೆರ್ ಮಾಹಿತಿ ನೀಡಿದ್ದಾರೆ. ಮುಖ್ಯ ಗೌಪ್ಯತೆ ಅಧಿಕಾರಿ ಡೇಮಿಯನ್ ಕೀರೆನ್ ಹಾಗೂ ಮುಖ್ಯ ಕಂಪ್ಲೈನ್ಸ್ ಆಫೀಸರ್ ಮರಿಯಾನ್ನೆ ಫೊಗಾರ್ಟಿ ಕೂಡ ರಾಜೀನಾಮೆ ನೀಡಿದ್ದಾರೆ.
ಟ್ವಿಟರ್‌ನ ಮೂರು ಪ್ರೈವೆಸಿ ಮತ್ತು ಕಂಪ್ಲೈನ್ಸ್ ಅಧಿಕಾರಿಗಳ ನಿರ್ಗಮನದ ಬೆಳವಣಿಗೆಯನ್ನು ತಾನು ಗಮನಿಸುತ್ತಿರುವುದಾಗಿ ಗುರುವಾರ ತಿಳಿಸಿದ ಅಮೆರಿಕಾದ ಫೆಡರಲ್ ಟ್ರೇಡ್ ಕಮಿಷನ್, ಇದರಿಂದ ಟ್ವಿಟರ್ ನಿಯಮಾವಳಿಗಳನ್ನು ಉಲ್ಲಂಘಿಸುವ ಅಪಾಯವೆದುರಿಸುತ್ತಿದೆ ಎಂದು ಹೇಳಿದೆ.
ಮುಂದಿನ ವರ್ಷ ಕಂಪೆನಿ ಬಹಳಷ್ಟು ಬಿಲಿಯನ್ ಡಾಲರ್ ನಷ್ಟ ಅನುಭವಿಸಬಹುದೆಂದು ಗುರುವಾರ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡುವ ವೇಳೆ ಮಸ್ಕ್ ಹೇಳಿದರು.
ಕಂಪೆನಿ ಪ್ರತಿ ದಿನ 4 ಮಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಿದೆ ಎಂದು ಮಸ್ಕ್ ಈಗಾಗಲೇ ಹೇಳಿದ್ದಾರೆ. ಟ್ವಿಟರ್ 13 ಬಿಲಿಯನ್ ಡಾಲರ್ ಸಾಲ ಹೊಂದಿದ್ದು ಅದಕ್ಕೆ ಅದು ಮುಂದಿನ 12 ತಿಂಗಳು ಸುಮಾರು 1.2 ಬಿಲಿಯನ್ ಡಾಲರ್ ತೆರಿಗೆ ಪಾವತಿಸಬೇಕಿದೆ.
ಈಗಾಗಲೇ ಟ್ವಿಟರ್‌ನ ಅರ್ಧದಷ್ಟು ಉದ್ಯೋಗಿಗಳನ್ನು ಮಸ್ಕ್ ಕೈಬಿಟ್ಟಿದ್ದಾರೆ.
ಇದನ್ನೂ ಓದಿ: "ವಂದೇ ಭಾರತ್ ಎಕ್ಸ್‌ಪ್ರೆಸ್", ''ಭಾರತ್ ಗೌರವ್ ಕಾಶಿ ದರ್ಶನ'' ರೈಲಿಗೂ ಪ್ರಧಾನಿ ಮೋದಿ ಚಾಲನೆ