ಉಕ್ರೇನ್ ಗೆ 40 ಕೋಟಿ ಡಾಲರ್ ಮೊತ್ತದ ಹೆಚ್ಚುವರಿ ಸೇನಾ ನೆರವು: ಅಮೆರಿಕ ಘೋಷಣೆ

ವಾಶಿಂಗ್ಟನ್,ನ.11: ಅಮೆರಿಕವು ಯುದ್ಧಪೀಡಿತ ಉಕ್ರೇನ್ ಗೆ (Ukraine) 40 ಕೋಟಿ ಡಾಲರ್ ಗೂ ಅಧಿಕ ವೌಲ್ಯದ ಸೇನಾ ನೆರವನ್ನು ರವಾನಿಸಲಿದೆಯೆಂದು ಅಮೆರಿಕ ಗುರುವಾರ ಘೋಷಿಸಿದೆೆ. ಅಪಾರ ಪ್ರಮಾಣದ ಮದ್ದುಗುಂಡುಗಳ ಪೂರೈಕೆ ಕೂಡಾ ಅಮೆರಿಕ ಉಕ್ರೇನ್ ಗೆ ನೀಡುವ ನರೆವಿನ ಪ್ಯಾಕೇಜ್ ನಲ್ಲಿ ಒಳಗೊಂಡಿವೆ.
ಇದೇ ಮೊದಲ ಬಾರಿಗೆ ನಾಲ್ಕು ಸಂಚಾರಿ ಆವೆಂಜರ್ ಏರ್ ಡಿಫೆನ್ಸ್ ಸಿಸ್ಟಮ್ಸ್ ಗಳನ್ನು ಅದು ಉಕ್ರೇನ್ ಸೇನೆಗೆ ಒದಗಿಸಲಿದೆ. ಇದರ ಜೊತೆಗೆ ಹಿಮಾರ್ಸ್ ಫಿರಂಗಿಗಳನ್ನು ಉಕ್ರೇನ್ ರಶ್ಯ ವಿರುದ್ಧದ ಆಕ್ರಮಣಕ್ಕೆ ಯಶಸ್ವಿಯಾಗಿ ಪ್ರಯೋಗಿಸಿತ್ತು.
10 ಸಾವಿರ ಸುತ್ತು ಮೋರ್ಟಾರಂ ಗುಂಡುಗಳು, ಸಾವಿರಾರು ಸುತ್ತು ಹೋವಿಚಟ್ಝರ್ಫಿರಂಗಿ ಮದ್ದುಗುಂಡುಗಳು, 400 ಗ್ರೆನೇಡ್ ಲಾಂಚರ್ಗಳು, 100 ಹಮ್ವಿ ಸೇನಾವಾಹನಗಳು, ಚಳಿ ನಿರೋಧಕ ಉಡುಪುಗಳು, ಹಾಗೂ ಸಣ್ಣ, ವೈಯಕ್ತಿಕ ಗನ್ಗಳು ಹಾಗೂ ರೈಫಲ್ಗಳನ್ನು ಕೂಡಾ ಅಮೆರಿಕವು ಉಕ್ರೇನ್ಗೆ ಪೂರೈಕೆ ಮಾಡಲಿದೆ.
Next Story