Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಕೋಮು ಸೌಹಾರ್ದಕ್ಕೆ ಗಾಂಧೀಜಿ ನೀಡಿರುವ...

ಕೋಮು ಸೌಹಾರ್ದಕ್ಕೆ ಗಾಂಧೀಜಿ ನೀಡಿರುವ ಆದ್ಯತೆಯನ್ನು ಒತ್ತಿ ಹೇಳುವ ಕೃತಿ

ಈ ಹೊತ್ತಿನ ಹೊತ್ತಿಗೆ

ಕೆ. ಮರುಳಸಿದ್ದಪ್ಪಕೆ. ಮರುಳಸಿದ್ದಪ್ಪ12 Nov 2022 11:29 AM IST
share
ಕೋಮು ಸೌಹಾರ್ದಕ್ಕೆ ಗಾಂಧೀಜಿ ನೀಡಿರುವ ಆದ್ಯತೆಯನ್ನು ಒತ್ತಿ ಹೇಳುವ ಕೃತಿ
ಈ ಹೊತ್ತಿನ ಹೊತ್ತಿಗೆ

ಡಾ. ಷಾಕಿರ ಖಾನಂ ಹಿಂದಿಯಿಂದ ಅನುವಾದಿಸಿರುವ ವಿಶ್ವನಾಥ್ ಪಾಂಡೆಯವರ ‘ಗಾಂಧೀಜಿ ಮತ್ತು ಹಿಂದೂ-ಮುಸಲ್ಮಾನರ ಸೌಹಾರ್ದತೆ’ ಎಂಬ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿರುವ ಸಂಗತಿಗಳನ್ನು ಗಾಂಧೀಜಿ ಅವರ ಬದುಕು ಮತ್ತು ಸಿದ್ಧಾಂತಗಳ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ.

 ವಿಶ್ವಕವಿ ರವೀಂದ್ರನಾಥ ಠಾಗೂರರ ಕವಿತೆಯ ಉಲ್ಲೇಖದೊಂದಿಗೆ ಆರಂಭವಾಗುವ ಈ ಕೃತಿ ಗಾಂಧೀಜಿ ಅವರ ಸರ್ವಧರ್ಮ ಸಮನ್ವಯದತ್ತ ಪಕ್ಷಿನೋಟ ಬೀರಿ ಭಾರತೀಯ ಹಾಗೂ ಜಗತ್ತಿನ ಧಾರ್ಮಿಕ ಪರಂಪರೆಗಳಲ್ಲಿ ಧರ್ಮವನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ಸಮಗ್ರವಾಗಿ ಸಮೀಕ್ಷಿಸುತ್ತದೆ. ಇದು ಪ್ರಥಮ ಅಧ್ಯಾಯ. ‘ಗಾಂಧೀಜಿ ಮತ್ತು ಹಿಂದೂ-ಮುಸ್ಲಿಮರ ಸೌಹಾರ್ದತೆ’ ಎಂಬುದು ಈ ಪುಸ್ತಕದ ಎರಡನೆಯ ಅಧ್ಯಾಯ. ಅಲ್ಲಿ ಗಾಂಧೀಜಿ ಅವರ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸುತ್ತಾ ಕೋಮು ಸೌಹಾರ್ದಕ್ಕೆ ಅವರು ನೀಡಿದ ಪ್ರಥಮ ಆದ್ಯತೆಯನ್ನು ಒತ್ತಿ ಹೇಳಲಾಗಿದೆ. ಅದರಲ್ಲಿಯೂ ಮುಸ್ಲಿಮ್ ಐಕ್ಯತೆ ಹಾಗೂ ಅಸ್ಪೃಶ್ಯತಾ ನಿವಾರಣೆ ಗಾಂಧೀಜಿಯ ಹೃದಯಕ್ಕೆ ಹತ್ತಿರವಾದ ಸಂಗತಿಗಳು. ‘‘ಭಾರತ ಸ್ವತಂತ್ರವಾದ ಬಳಿಕ ಬಹುಸಂಖ್ಯಾತ ಸಂಪ್ರದಾಯದ ಹಿಂದೂಗಳ ರಾಷ್ಟ್ರವಾಗುತ್ತಿದೆ ಎಂದು ಹೇಳುವುದಕ್ಕಿಂತ ದೊಡ್ಡ ತಪ್ಪು ಬೇರೊಂದಿಲ್ಲ. ಒಂದು ವೇಳೆ ಹೀಗೇನಾದರೂ ಆದರೆ ನಾನು ಒಬ್ಬಂಟಿಯಾದರೂ ಸರಿಯೇ ಇಂತಹ ಸ್ವಾತಂತ್ರ್ಯವನ್ನು ಧಿಕ್ಕರಿಸಿ ಅವರ ವಿರುದ್ಧ ಹೋರಾಡುತ್ತೇನೆ’’ ಎಂದು ಗಾಂಧೀಜಿ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿಯೇ ಘೋಷಿಸಿದರು. ‘‘ಹಿಂದುಸ್ಥಾನ ಎಷ್ಟು ಹಿಂದೂಗಳದ್ದೋ ಅಷ್ಟೇ ಮುಸ್ಲಿಮರದ್ದು, ಪಾರ್ಸಿ, ಯಹೂದಿ-ಕ್ರೈಸ್ತ ಮತ್ತು ಹಿಂದೂಗಳಲ್ಲದವರಿಗೂ ಸೇರಿದ್ದು...ಜಾತಿ, ಧರ್ಮ ವೈಯಕ್ತಿಕ ವಿಚಾರ ರಾಜ್ಯಾಡಳಿತದಲ್ಲಿ ಅದಕ್ಕೆ ಯಾವುದೇ ಮಹತ್ವವಿಲ್ಲ’’ ಇದು ಗಾಂಧೀಜಿಯವರ ಸ್ಪಷ್ಟ ನಂಬಿಕೆಯಾಗಿತ್ತು.

ದೇವರಲ್ಲಿ ಅಗಾಧವಾದ ಶ್ರದ್ಧೆ ಇಟ್ಟುಕೊಂಡಿದ್ದ ಗಾಂಧೀಜಿ ತಾನೊಬ್ಬ ಸನಾತನ ಹಿಂದೂ ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಅದು ಸಂಕುಚಿತ ದೃಷ್ಟಿಯ ಹಿಂದುತ್ವವಾಗಿರಲಿಲ್ಲ. ‘‘ನನ್ನ ಮನೆ ಎತ್ತರವಾದ ಗೋಡೆಗಳಿಂದ ಸುತ್ತುವರಿದು ನಾಲ್ಕು ಕಡೆಯ ಕಿಟಕಿಗಳು ಮುಚ್ಚಿರಲಿ ಎಂದು ನಾನು ಬಯಸುವುದಿಲ್ಲ. ನನ್ನ ಮನೆಯ ನಾಲ್ಕು ಕಡೆ ಎಲ್ಲಾ ದೇಶಗಳ, ಧರ್ಮಗಳ, ಸಂಸ್ಕೃತಿಯ ಶುದ್ಧ ಗಾಳಿ ಸ್ವತಂತ್ರವಾಗಿ ಬೀಸುತ್ತಿರಲಿ ಎಂದು ಬಯಸುತ್ತೇನೆ.’’ ಇದು ಗಾಂಧೀಜಿಯ ಹಿಂದುತ್ವದ ಕಲ್ಪನೆಯಾಗಿತ್ತು. ಮುಸ್ಲಿಮ್, ಜೈನ ಹಾಗೂ ಕ್ರೈಸ್ತ ಧರ್ಮಗಳು ಗಾಂಧೀಜಿ ಯವರ ಅಹಿಂಸಾ ತತ್ವದ ಮೇಲೆ ಪ್ರಭಾವ ಬೀರಿವೆ ಎಂಬಂತಿದ್ದರೂ ಅವರ ಪ್ರಕಾರ ಎಲ್ಲಾ ಧರ್ಮಗಳ ಸಾರಾಂಶ ರೂಪದಲ್ಲಿ ಒಂದೇ ಆಗಿದ್ದವು. ಎಲ್ಲಾ ಧರ್ಮಗಳ ಗ್ರಂಥಗಳನ್ನು, ನಂಬಿಕೆ ಆಚರಣೆಗಳನ್ನು ಅವರು ಆಳವಾಗಿ ಅಧ್ಯಯನಮಾಡಿ ತಿಳಿದುಕೊಂಡಿದ್ದರು. ಬಳಿಕವೇ ಅವರು ಎಲ್ಲ ಧರ್ಮಗಳ ಮೂಲ ಸ್ವರೂಪ ಒಂದು ಎಂದು ಸಾರಿ ಹೇಳಿದರು. ‘‘ನಾನೊಬ್ಬ ಸನಾತನ ಹಿಂದೂ, ಆದ್ದರಿಂದ ನಾನು ಮುಸಲ್ಮಾನನೂ ಹೌದು, ಸಿಖ್ಖನೂ ಹೌದು, ಪಾರ್ಸಿ, ಕ್ರೈಸ್ತ, ಯಹೂದಿಯೂ ಆಗಿದ್ದೇನೆ’’ ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಜಾತಿ-ಧರ್ಮಗಳ ಪ್ರತ್ಯೇಕತಾವಾದವನ್ನು ಪ್ರಚಾರ ಮಾಡುತ್ತಿದ್ದ ಮತಾಂಧರಿಗೆ ಗಾಂಧೀಜಿ ಅವರ ವಿವೇಕವಾಣಿಯನ್ನು ಕೇಳಿಸಿಕೊಳ್ಳುವ ತಾಳ್ಮೆ ಇರಲಿಲ್ಲ. ಗಾಂಧೀಜಿ, ಅವರ ಹಾದಿಯಲ್ಲಿ ಬಹುದೊಡ್ಡ ಅಡ್ಡಿ ಎಂಬಂತೆ ಕಂಡು ಬಂದು ಗಾಂಧೀಜಿ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಸ್ವಾತಂತ್ರ್ಯ ಸಂಭ್ರಮದ ಜೊತೆಜೊತೆಗೆ ಕೋಮುದ್ವೇಷ ದಂಗೆಗಳು ದೇಶದಲ್ಲೆಡೆ ಭುಗಿಲೆದ್ದು ತಲ್ಲಣಗೊಳಿಸಿದವು. ಗಾಂಧೀಜಿ ಸಾರಿದ ಕೋಮು ಸಾಮರಸ್ಯ ಒಪ್ಪದವರನ್ನು ಮತ್ತು ಅವರ ಸಿದ್ಧಾಂತ ಕುರಿತಾದ ಗ್ರಂಥದಲ್ಲಿ ಗಾಂಧೀಜಿ ಹತ್ಯೆಯ ಬಗ್ಗೆ ಒಂದು ಚಿಕ್ಕ ಅಧ್ಯಾಯವಿದೆ. ಅಂದಿನ ಚರಿತ್ರೆಯ ಒಂದು ಕಿರುನೋಟ ಅಲ್ಲಿ ಸಿಗುತ್ತದೆ.

ಸರ್ವ ಧರ್ಮ ಸಾಮರಸ್ಯವನ್ನು ಪ್ರತಿಪಾದಿಸಿದ ಗಾಂಧೀಜಿ ಸ್ವಾತಂತ್ರ್ಯ ಬಂದ ಬಳಿಕ ಬಹುಬೇಗ ಹಿಂದೂ ಮತಾಂಧನ ಗುಂಡಿಗೆ ಬಲಿಯಾಗಿ ಹುತಾತ್ಮರಾದದ್ದು ಕೇವಲ ಆಕಸ್ಮಿಕವೆಂದು ಪರಿಗಣಿಸಲಾಗುವುದಿಲ್ಲ. ಇದಕ್ಕೆ ಮತಾಂಧ ಶಕ್ತಿಗಳು ವೇದಿಕೆ ಕಲ್ಪಿಸಿದ್ದರು. ಹಿಂದೂ-ಮುಸ್ಲಿಂ ಎರಡು ಧರ್ಮಗಳ ಮತಾಂಧರು ಪರಸ್ಪರ ದೇಶದ ವಿಷಯವನ್ನೇ ಕಕ್ಕುತ್ತಿದ್ದರು. ಎರಡೂ ಕಡೆ ಗಾಂಧೀಜಿ ಅವರ ತತ್ವ ಸಿದ್ಧಾಂತವನ್ನು ಒಪ್ಪಿದವರು ಇದ್ದರು. ಗಾಂಧೀಜಿ ಎಲ್ಲರನ್ನೂ ಮತ್ತು ಮತಾಂಧರನ್ನೂ ಪ್ರೀತಿಯಿಂದ ಒಲಿಸಿಕೊಳ್ಳಲು ಪ್ರಯತ್ನಿಸಿದರು.

ಆದರೇನು? ಕೆರಳಿದ ನಾಗರ ಹಾವು ಕಚ್ಚಿದ ಕೂಡಲೇ ಅದರ ವಿಷ ಗಾಯಕ್ಕೆ ಸೇರಿ ನೆತ್ತಿಗೇರುತ್ತದೆ. ಮಹಾನ್ ಸಂತನಾದರೂ ಹಾವಿನ ವಿಷಕ್ಕೆ ಬಲಿಯಾಗಲೇ ಬೇಕು. ಇದು ಚರಿತ್ರೆಯಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುವುದು ಘೋರ ದುರಂತ. ಗಾಂಧೀಜಿ ಅವರ ಹತ್ಯೆಯೊಂದಿಗೆ ಮತಾಂಧ ಶಕ್ತಿಗಳು ತಾತ್ಕಾಲಿಕವಾಗಿ ಹಿಮ್ಮೆಟ್ಟಿದ್ದವು. ಮುಂದೆ ಭಾರತದ ಸಂವಿಧಾನ ಸೆಕ್ಯುಲರ್ ತತ್ವವನ್ನು ಎತ್ತಿಹಿಡಿಯಿತು. ಚಿಕ್ಕಪುಟ್ಟ ಮತೀಯ ಗಲಭೆಗಳ ನಡುವೆಯೂ ಭಾರತೀಯ ಪ್ರಜಾಪ್ರಭುತ್ವ ಸುಭದ್ರವಾಗಿಯೇ ಬೇರೂರಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಲಗಿದ್ದ ನಾಗರಹಾವು ಮತ್ತೆ ಬುಸುಗುಡುತ್ತಿದೆ. ಹೆಡೆಯೆತ್ತಿ ಪೊತ್ಕರಿಸುತ್ತಿದೆ. ಸೆಕ್ಯುಲರ್ ಸಂವಿಧಾನಕ್ಕೆ ಔಪಚಾರಿಕ ಗೌರವ ಸಲ್ಲಿಸುತ್ತಲೇ ಮತೀಯ ಶಕ್ತಿಗಳು ತಮ್ಮ ಕಾರ್ಯತಂತ್ರಗಳನ್ನು ಜಾರಿಗೊಳಿಸುತ್ತಿವೆ. ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿಯಾಗುತ್ತಿದೆ. ಬಲಾತ್ಕಾರ, ಮತಾಂತರದ ಸುಳ್ಳು ಆರೋಪ ಹೊರಿಸಿ ಅವರನ್ನು ಬೆದರಿಸಲಾಗುತ್ತಿದೆ. ಅನ್ಯ ಕೋಮಿನ ಮಹಿಳೆಯರ ಮೇಲೆ ಹೇಸಿಗೆ ಹುಟ್ಟಿಸುವಂತಹ ಅಪಪ್ರಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಆಹಾರದ ಹಕ್ಕನ್ನೇ ಪ್ರಶ್ನಿಸುವ ಮೂಲಕ ಮಾಂಸಾಹಾರಿಗಳನ್ನು ಕೀಳರಿಮೆಗೆ ತಳ್ಳಲಾಗುತ್ತಿದೆ. ಮಾಂಸಾಹಾರಿ ದಲಿತರು, ಹಿಂದುಳಿದವರು ದೇಶದ ಬಹುಸಂಖ್ಯಾತರು ಮತ್ತೆ ಮತ್ತೆ ಅಪಮಾನಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಆತಂಕದ ಕಾಲದಲ್ಲಿ ಗಾಂಧೀಜಿ ಅವರ ನೆನಪು ನಮಗೆ ಚೇತೋಹಾರಿ ಎನ್ನಬಹುದಾಗಿದೆ.

‘‘ಗಾಂಧೀಜಿ ಮತ್ತು ಹಿಂದೂ-ಮುಸ್ಲಿಮರ ಸೌಹಾರ್ದತೆ’’ ಎಂಬ ಪುಸ್ತಕದ ಪ್ರಕಟಣೆ ಈಗ ಖಂಡಿತ ಪ್ರಸ್ತುತವಾಗಿದೆ. ಈ ಕೃತಿಯ ಅನುವಾದ ಮಾಡಿರುವ ಡಾ. ಷಾಕಿರ ಖಾನಂ ಸೈದ್ಧಾಂತಿಕವಾಗಿ ಸೆಕ್ಯುಲರ್ ತತ್ವಕ್ಕೆ ಬದ್ಧರಾದವರು, ತಮ್ಮ ಮುಸ್ಲಿಮ್ ಆಸ್ಮಿತೆಯ ಬಗೆಗೂ ಅವರಿಗೆ ಕಾಳಜಿ ಇದೆ. ಧಾರ್ಮಿಕ ಸಾಮರಸ್ಯವನ್ನು ಎತ್ತಿಹಿಡಿದಿರುವ ಇನ್ನು ಕೆಲವು ಪುಸ್ತಕಗಳನ್ನು ಈಗಾಗಲೇ ಅವರು ಅನುವಾದಿಸಿ ಪ್ರಕಟಿಸಿದ್ದಾರೆ. ಸ್ವತಃ ಕವಿ ಹಾಗೂ ಪ್ರಾಧ್ಯಾಪಕರಾಗಿರುವ ಅವರಿಂದ ಈ ಬಗೆಯ ಇನ್ನೂ ಕೆಲವು ಗ್ರಂಥಗಳನ್ನು ನಿರೀಕ್ಷಿಸಬಹುದು. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.

(ಮುನ್ನುಡಿಯ ಆಯ್ದ ಭಾಗ)

share
ಕೆ. ಮರುಳಸಿದ್ದಪ್ಪ
ಕೆ. ಮರುಳಸಿದ್ದಪ್ಪ
Next Story
X