ಈಜು ಸ್ಪರ್ಧೆ: 2 ಬೆಳ್ಳಿ, 4 ಕಂಚಿನ ಪದಕದೊಂದಿಗೆ ಪಿ.ಎ.ಮುಹಮ್ಮದ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಮಂಗಳೂರು, ನ.12: ಬೆಂಗಳೂರಿನ ವಿಜಯನಗರ ಅಕ್ವೆಟಿಕ್ ಸೆಂಟರ್ ನಲ್ಲಿ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್, ಸ್ಪೋರ್ಟ್ ಅಥರಟಿ ಆಫ್ ಕರ್ನಾಟಕದ ಸಂಯೋಜನೆಗೊಂಡ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ಇತ್ತೀಚೆಗೆ ಆಯೋಜಿಸಿದ್ದ 23ನೇ ರಾಜ್ಯಮಟ್ಟದ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಪಾಂಡೇಶ್ವರ ನಿವಾಸಿ ಪಿ.ಎ.ಮುಹಮ್ಮದ್ ಕಾಟಿಪಳ್ಳ ಅವರು 2 ಬೆಳ್ಳಿ, 4 ಕಂಚಿನ ಪದಕದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುಹಮ್ಮದ್ ಕಾಟಿಪಳ್ಳ 50 ಮೀ. ಬ್ರೆಸ್ಟ್ ಸ್ಟ್ರೋಕ್ , 4x50 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಮತ್ತು 50 ಮೀ., 100 ಮೀ. ಫ್ರೀ ಸ್ಟೈಲ್ , 100 ಮೀ. ಬ್ರೆಸ್ಟ್ ಸ್ಟ್ರೋಕ್, 4x50 ಮೀ. ಮಿಡ್ಲೆ ರಿಲೇಯಲ್ಲಿ ಕಂಚಿನ ಪದಕಗಳನ್ನು ಜಯಿಸಿದ್ದು, ನವೆಂಬರ್ 25ರಿಂದ 27ರ ತನಕ ಹರ್ಯಾಣದ ಅಂಬಾಲದಲ್ಲಿ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸುವ ರಾಷ್ಟ್ರ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಅರ್ಹತೆ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.