ವಿದ್ಯಾರ್ಥಿ ಬಸ್ ಪಾಸ್ಗೆ 24 ಗಂಟೆಯೂ ಮಾನ್ಯತೆ; BMTC ಸ್ಪಷ್ಟನೆ
ಬೆಂಗಳೂರು, ನ.13: ವಿದ್ಯಾರ್ಥಿಗಳು ತಮಗೆ ನೀಡಿರುವ ಬಸ್ಪಾಸ್ ಬಳಸಿ ದಿನದ 24 ಗಂಟೆಯೂ ಪ್ರಯಾಣಿಸಬಹುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಸ್ಪಷ್ಟಪಡಿಸಿದೆ.
ವಿದ್ಯಾರ್ಥಿ ಪಾಸ್ಗಳಿಗೆ ಸಂಜೆ 7.30ರ ನಂತರ ಮಾನ್ಯವಿಲ್ಲ ಎಂದು ಕೆಲ ಬಸ್ಗಳಲ್ಲಿ ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದರು. ಈ ಬಗ್ಗೆ ಬಿಎಂಟಿಸಿ ಕಚೇರಿಗೆ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಪಾಸ್ ಹೊಂದಿರುವ ವಿದ್ಯಾರ್ಥಿಗಳ ಬಳಿ ನಿರ್ವಾಹಕರು ಟಿಕೆಟ್ ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳು ಪಾಸ್ ಬಳಸಿ ದಿನದ ಯಾವುದೇ ಸಮಯದಲ್ಲೂ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲಾರದಿಂದ ಸ್ಪರ್ಧೆ: ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ...
Next Story