ನ.14: ಸಿಟಿ ಗೋಲ್ಡ್‌ನಿಂದ ಮಕ್ಕಳ ದಿನಾಚರಣೆ

ಮಂಗಳೂರು, ನ.13: ನಗರದ ಕಂಕನಾಡಿಯಲ್ಲಿರುವ ಸಿಟಿಗೋಲ್ಡ್ ವತಿಯಿಂದ ನ.14ರಂದು ಸಂಜೆ 4:30ಕ್ಕೆ ಮಕ್ಕಳ ದಿನಾಚರಣೆಯ ಪ್ರಯುಕ್ತ ‘ವಾವ್ ಕಿಡ್ಸ್’ ಕಾರ್ಯಕ್ರಮ ನಡೆಯಲಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಾದ ಮಣಿಪಾಲ ಸ್ಕೂಲ್‌ನ ಮುಹಮ್ಮದ್ ಶಾಝೀನ್ ಖಾದಿರಿ, ಮಿಜಾರ್ ಆದರ್ಶ ಪಿಯು ಕಾಲೇಜಿನ ಫಾತಿಮಾತ್ ಫಝೀಲತ್ ನೀರುಮಾರ್ಗದ ಪ್ರೆಸಿಡೆನ್ಸಿಯ ಸ್ಕೂಲ್‌ನ ಮುಹಮ್ಮದ್ ಫರಾಝ್ ಅಲಿ, ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್‌ನ ರಿಯನ್ನ ಧೃತಿ ಫೆರ್ನಾಂಡಿಸ್, ಮಂಗಳೂರು ಕೇಂದ್ರೀಯ ವಿದ್ಯಾಲಯದ ದಿಲ್ನ ರಾಜೇಶ್ ಅವರಿಗೆ ಸನ್ಮಾನ ಹಾಗೂ ಟ್ಯಾಲೆಂಟ್ ಚಾಂಪಿಯನ್ಸ್ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಡಾ. ಸರೀನಾ ಪಿ., ರೂಪಾ ಬಾಳಿಗ, ಜೆನಿಫರ್ ಬರೆಟ್ಟೊ, ಶಾಹಿದಾ ಬಿ.ಎಂ. ಪ್ರೊ. ಸಕೀನಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story