ದೇಶ ಆರ್ಥಿಕವಾಗಿ ಅಭಿವೃದ್ಧಿ ಕಾಣಲು ಸಹಕಾರಿ ಕ್ಷೇತ್ರ ಅತಿ ಅಗತ್ಯ: ರಮೇಶ್ ವೈದ್ಯ

ಉಡುಪಿ: ರಾಜ್ಯದಲ್ಲಿ ಸಹಕಾರ ಭಾರತಿಗೆ ಭದ್ರ ಬುನಾದಿ ಅವಿಭಜಿತ ದ.ಕ. ಜಿಲ್ಲೆ. ದೇಶ ಆರ್ಥಿಕವಾಗಿ ಅಭಿವೃದ್ಧಿ ಕಾಣಲು ಸಹಕಾರಿ ಕ್ಷೇತ್ರ ಅತಿಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರದಿಂದ ಸಹಕಾರ ಸಂಘಕ್ಕೆ ಮತ್ತಷ್ಟು ಹೆಚ್ಚಿನ ನೆರವು ಸಿಗು ವಂತಾಗಬೇಕು ಎಂದು ಸಹಕಾರ ಭಾರತಿಯ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ ಹೇಳಿದ್ದಾರೆ.
ಉಡುಪಿ ನೈವೇದ್ಯ ಹೊಟೇಲ್ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯ ಕ್ರಮದಲ್ಲಿ ಸಹಕಾರ ಭಾರತಿ ಉಡುಪಿ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಹಕಾರ ಕ್ಷೇತ್ರದಲ್ಲಿ ಬದ್ದತೆ ಇರಬೇಕು. ಗ್ರಾಮೀಣ ಪ್ರದೇಶದ ರೈತರು, ಜನರಿಗೆ ಸಹಕಾರ ಕ್ಷೇತ್ರದಿಂದ ಹೆಚ್ಚಿನ ಉನ್ನತಿ ಸಿಗಲು ಸಾಧ್ಯವಿದೆ. ಸಹಕಾರಿ ಭಾರತಿ ಗ್ರಾಮಾಂತರ ಭಾಗದ ರೈತರ ಹಿತ ಕಾಪಾಡಿ ಪ್ರಾಮಾಣಿಕ ಕೆಲಸ ಮಾಡಬೇಕು. ಭಾರತದ 5 ಟ್ರಿಲಿಯನ್ ಆರ್ಥಿಕತೆಗೆ ಸಹಕಾರ ಭಾರತಿಯನ್ನು ಮತ್ತಷ್ಟು ಪ್ರಬಲಗೊಳಿಸ ಬೇಕು ಎಂದರು.
ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ, ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಚ್.ಕೃಷ್ಣಾ ರೆಡ್ಡಿ, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮಡ್ತಿಲ, ಮೈಸೂರು ವಿಭಾಗದ ಸಂಘಟನ ಪ್ರಮುಖ್ ಮೋಹನ್ ಕುಮಾರ್ ಕುಂಬ್ಳೇಕರ್, ಹಾಲು ಪ್ರಕೋಷ್ಟದ ರಾಜ್ಯ ಸಂಚಾಲಕ ಸಾಣೂರು ನರಸಿಂಹ ಕಾಮತ್, ಕೋಶಾಧಿಕಾರಿ ದಯಾನಂದ ಹೆಗ್ಡೆ ಕಡ್ತಲ, ತಾಲೂಕು ಅಧ್ಯಕ್ಷರು ಗಳಾದ ಅಶೋಕ್ ಆಚಾರ್ಯ, ಗಂಗಾಧರ್ ಸುವರ್ಣ, ದೀನ್‌ಪಾಲ್ ಶೆಟ್ಟಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಸುಜಿತ್ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶಿರೂರು ಸ್ವಾಗತಿಸಿ ದರು. ಉಡುಪಿ ತಾಲೂಕು ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ವಂದಿಸಿದರು. ಕೆಎಂಎಫ್ ನಿರ್ದೇಶಕ ಕನ್ನಾರು ಕಮಲಾಕ್ಷ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.







