ಕಂಕನಾಡಿ: ಬೀದಿಬದಿ ವ್ಯಾಪಾರ ತೆರವು

ಮಂಗಳೂರು: ನಗರದ ಕಂಕನಾಡಿಯ ಖಾಸಗಿ ಆಸ್ಪತ್ರೆಯ ಮುಂಭಾಗದ ಪ್ರಮುಖ ರಸ್ತೆಯ ಬದಿಯಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಬೀದಿಬದಿ ವ್ಯಾಪಾರವನ್ನು ರವಿವಾರ ಸಂಜೆ ತೆರವುಗೊಳಿಸಲಾಗಿದೆ.
ಮನಪಾ ಆಡಳಿತದ ಸೂಚನೆಯ ಮೇರೆಗೆ ಜೆಸಿಬಿ ಬಳಸಿ ಗೂಡಂಗಡಿ, ಟೆಂಪೋ ಸಹಿತ 8 ವ್ಯಾಪಾರ ಘಟಕವನ್ನು ತೆರವುಗೊಳಿಸಲಾಗಿದೆ. ಇದರಲ್ಲಿ ಫಾಸ್ಟ್‌ಫುಡ್, ಹಣ್ಣು ಹಂಪಲು ಇತ್ಯಾದಿ ಅಂಗಡಿ ಸೇರಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಭರತ್ ಕಂಕನಾಡಿಯಿಂದ ವೆಲೆನ್ಸಿಯಾ ರಸ್ತೆಯಲ್ಲಿ ಅನಧಿಕೃತ ಅಂಗಡಿಗಳಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅಂಗಡಿಯ ಮಾಲಕರಿಗೆ ಈ ಬಗ್ಗೆ ಮುನ್ಸೂಚನೆ ನೀಡಲಾಗಿತ್ತು. ಅದರಂತೆ ಇಂದು ಕಾರ್ಯಾಚರಣೆ ನಡೆಸಲಾಗಿದೆ ಎಂದಿದ್ದಾರೆ.
Next Story