ಮುಂಬೈ ವಿಮಾನ ನಿಲ್ದಾಣದಲ್ಲಿ 61 ಕಿ.ಗ್ರಾಂ. ಚಿನ್ನ ವಶ: 7 ಮಂದಿಯ ಬಂಧನ
![ಮುಂಬೈ ವಿಮಾನ ನಿಲ್ದಾಣದಲ್ಲಿ 61 ಕಿ.ಗ್ರಾಂ. ಚಿನ್ನ ವಶ: 7 ಮಂದಿಯ ಬಂಧನ ಮುಂಬೈ ವಿಮಾನ ನಿಲ್ದಾಣದಲ್ಲಿ 61 ಕಿ.ಗ್ರಾಂ. ಚಿನ್ನ ವಶ: 7 ಮಂದಿಯ ಬಂಧನ](https://www.varthabharati.in/sites/default/files/images/articles/2022/11/13/356287-1668360120.jpg)
ಮುಂಬೈ, ನ. 13: ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 32 ಕೋ. ರೂ. ಮೌಲ್ಯದ 61 ಕಿ.ಗ್ರಾಂ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕಸ್ಟಮ್ಸ್ ಇಲಾಖೆ ಈ ವಿಮಾನ ನಿಲ್ದಾಣದಲ್ಲಿ ಒಂದೇ ದಿನ ಅತ್ಯಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಈ ಪ್ರಕರಣಗಳಿಗೆ ಸಂಬಂಧಿಸಿ ಐವರು ಪುರುಷರು, ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ 7 ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
On 11.11.2022, Mumbai Airport Customs foiled attempts to smuggle 61 Kg gold valued @ Rs 32 Crore. This was the highest ever seizure in a single day. 7 passengers were arrested. @cbic_india @nsitharamanoffc pic.twitter.com/nN2Y3ys9Ci
— Mumbai Customs-III (@mumbaicus3) November 13, 2022
Next Story