Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿಧಾನಸಭಾ ಚುನಾವಣೆ: ಬಿಜೆಪಿಯಿಂದ...

ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಕಣಕ್ಕಿಳಿದ ಪುತ್ರಿಯ ಪ್ರಚಾರಕ್ಕೆ ನೆರವಾಗುತ್ತಿರುವ ಗುಜರಾತ್ ಗಲಭೆ ಅಪರಾಧಿ

13 Nov 2022 10:55 PM IST
share
ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಕಣಕ್ಕಿಳಿದ ಪುತ್ರಿಯ ಪ್ರಚಾರಕ್ಕೆ ನೆರವಾಗುತ್ತಿರುವ ಗುಜರಾತ್ ಗಲಭೆ ಅಪರಾಧಿ

ಅಹ್ಮದಾಬಾದ್,ನ.13: ಗುಜರಾತನಲ್ಲಿ ಆಡಳಿತಾರೂಢ ಬಿಜೆಪಿಯು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನರೋಡಾ ಪಾಟಿಯಾ ನರಮೇಧ ಪ್ರಕರಣದಲ್ಲಿ ದೋಷಿಯೆಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟಿರುವ ಮನೋಜ್ ಕುಲಕರ್ಣಿಯ ಪುತ್ರಿ ಪಾಯಲ್ ಕುಲಕರ್ಣಿಯನ್ನು ನರೋಡಾ ಕ್ಷೇತ್ರದಿಂದ ಕಣಕ್ಕಿಳಿಸುವ ಮೂಲಕ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿದೆ. ಜೀವಿತಾವಧಿ ಶಿಕ್ಷೆಗೆ ಗುರಿಯಾಗಿದ್ದರೂ 2015ರಿಂದಲೂ ಜಾಮೀನಿನಲ್ಲಿ ಹೊರಗಿರುವ ಕುಲಕರ್ಣಿ ಪುತ್ರಿಗೆ ಚುನಾವಣಾ ಪ್ರಚಾರದಲ್ಲಿ ನೆರವಾಗುತ್ತಿದ್ದಾನೆ.

ಇದಕ್ಕೂ ಮುನ್ನ ಗೋಧ್ರಾ ಕ್ಷೇತ್ರದಿಂದ ಚಂದ್ರಸಿನ್ಹ ರಾಹುಲ್ಜಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ತೀವ್ರ ಟೀಕೆಗೆ ಗುರಿಯಾಗಿತ್ತು. ಬಿಲ್ಕಿಸ್ ಬಾನು ಪ್ರಕರಣದ ತಪ್ಪಿತಸ್ಥರನ್ನು ‘ಸಂಸ್ಕಾರಿ ಬ್ರಾಹ್ಮಣರು ’ಎಂದು ಬಣ್ಣಿಸಿದ್ದ ರಾಹುಲ್ಜಿ,ಅವರ ಜೀವಾವಧಿ ಶಿಕ್ಷೆಯನ್ನು ಮಾಫಿ ಮಾಡಿದ್ದ ಗುಜರಾತ ಸರಕಾರದ ಸಮಿತಿಯ ಸದಸ್ಯರಾಗಿದ್ದರು.ಯಾವುದೇ ರಾಜಕೀಯ ಅನುಭವವಿಲ್ಲದ,ವೃತ್ತಿಯಲ್ಲಿ ಅರಿವಳಿಕೆ ತಜ್ಞೆಯಾಗಿರುವ ಪಾಯಲ್ರನ್ನು ನರೋಡಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಬಲರಾಮ ಥವಾನಿ ಬದಲಿಗೆ ಕಣಕ್ಕಿಳಿಸಲಾಗಿದೆ. ಗಲಭೆ ಅಪರಾಧಿಗಳನ್ನು ಪುರಸ್ಕರಿಸಲು ಬಿಜೆಪಿಯು ತನ್ನ ಅಭ್ಯರ್ಥಿಯನ್ನಾಗಿ ಪಾಯಲ್ರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಪ್ರಚಾರದ ಸಂದರ್ಭ ಕುಲಕರ್ಣಿಗೆ ಥವಾನಿ ಮತ್ತು ಬಿಜೆಪಿ ಕಾರ್ಯಕರ್ತರಿಂದ ಬೆಚ್ಚಗಿನ ಸ್ವಾಗತ ಲಭಿಸಿದೆ.ಬಿಜಪಿ ನರೋಡಾ ಪಾಟಿಯಾ ನರಮೇಧ ನಡೆದಿದ್ದ ಕ್ಷೇತ್ರದಿಂದಲೇ ಪಾಯಲ್ರನ್ನು ಕಣಕ್ಕಿಳಿಸಿರುವುದು ಹಲವರಿಗೆ ಆಘಾತವನ್ನುಂಟು ಮಾಡಿದೆ. 2012ರಲ್ಲಿ ಪ್ರಕರಣದಲ್ಲಿ ದೋಷಿಗಳಾಗಿ ನ್ಯಾಯಾಲಯವು ಘೋಷಿಸಿದ್ದ 32 ಜನರಲ್ಲಿ ಮನೋಜ ಕುಲಕರ್ಣಿ ಓರ್ವನಾಗಿದ್ದಾನೆ. 2002 ಗುಜರಾತ ಗಲಭೆಗಳ ಸಂದರ್ಭ ನಡೆದಿದ್ದ ಮಾರಣಹೋಮದಲ್ಲಿ ಗುಂಪು 97 ಜನರನ್ನು ಹತ್ಯೆಗೈದಿತ್ತು.ಕುಲಕರ್ಣಿಯ ನೆರೆಕರೆಯವರು ಹೇಳಿರುವಂತೆ ನ್ಯಾಯಾಲಯವು ತನಗೆ ಶಿಕ್ಷೆ ವಿಧಿಸಿದಾಗಿನಿಂದಲೂ ಈತ ಮಧ್ಯಂತರ ಜಾಮೀನಿನಲ್ಲಿ ಹೆಚ್ಚಾಗಿ ಜೈಲಿನಿಂದ ಹೊರಗೇ ಇದ್ದಾನೆ.

ಚುನಾವಣಾ ಪ್ರಚಾರದಲ್ಲಿ ತನ್ನ ತಂದೆಯ ಪಾತ್ರದ ಕುರಿತು ಪ್ರಶ್ನೆಗೆ ಪಾಯಲ್,‘ನನ್ನ ತಂದೆಯ ದೋಷನಿರ್ಣಯವನ್ನು ನಮ್ಮ ಕುಟುಂಬವು ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ನನ್ನ ತಂದೆ ಅನುಭವಿ ರಾಜಕಾರಣಿಯಾಗಿದ್ದಾರೆ. ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವುದರಿಂದ ನಾನು ಅವರ ದೋಷನಿರ್ಣಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನನ್ನ ತಂದೆ-ತಾಯಿ ಮತ್ತು ಎಲ್ಲ ಬಿಜೆಪಿ ನಾಯಕರು ನನಗೆ ಚುನಾವಣಾ ಪ್ರಚಾರದಲ್ಲಿ ನೆರವಾಗುತ್ತಿದ್ದಾರೆ ಮತ್ತು ಅಭಿವೃದ್ಧಿಯ ವಿಷಯವನ್ನಿಟ್ಟುಕೊಂಡು ನಾವು ಗೆಲ್ಲುತ್ತೇವೆ ಎಂದಷ್ಟೇ ನಾನು ಹೇಳಬಲ್ಲೆ ’ ಎಂದು ಉತ್ತರಿಸಿದರು.

2018ರಲ್ಲಿ ಗುಜರಾತ್ ಉಚ್ಚ ನ್ಯಾಯಾಲಯವು ಕುಲಕರ್ಣಿ ಮತ್ತು ಬಜರಂಗ ದಳದ ನಾಯಕ ಬಾಬು ಬಜರಂಗಿ ಸೇರಿದಂತೆ 12 ಜನರ ದೋಷನಿರ್ಣಯವನ್ನು ಎತ್ತಿ ಹಿಡಿದಿತ್ತು. ಇದರ ವಿರುದ್ಧ ಕುಲಕರ್ಣಿ ಸಲ್ಲಿಸಿರುವ ಮೆಲ್ಮನವಿ ಈಗಲೂ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಾಗಿದ್ದು,ಇದರಿಂದಾಗಿ ಆತನ ಜಾಮೀನು ಮುಂದುವರಿದಿದೆ.

share
Next Story
X