Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಚಾಚಾ ನೆಹರೂ ನೆನಪು ನಿತ್ಯ ಚೇತೋಹಾರಿ

ಚಾಚಾ ನೆಹರೂ ನೆನಪು ನಿತ್ಯ ಚೇತೋಹಾರಿ

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ14 Nov 2022 12:05 AM IST
share
ಚಾಚಾ ನೆಹರೂ ನೆನಪು ನಿತ್ಯ ಚೇತೋಹಾರಿ

ನೆಹರೂ ಅವರಿಗೆ ಸ್ಫೂರ್ತಿ ನೀಡಿದ ಸೋವಿಯತ್ ಸಮಾಜವಾದಿ ವ್ಯವಸ್ಥೆ ಯಾವಾಗ ಕುಸಿದು ಬಿತ್ತೋ ಆಗಲೇ ವಿಶ್ವದ ರಾಜಕೀಯ,ಆರ್ಥಿಕ ಅಭಿವೃದ್ಧಿ ಮಾರ್ಗದ ದಿಕ್ಕು ಬದಲಾಯಿತು. ಇದನ್ನು ಮತ್ತೆ ಸರಿ ದಾರಿಗೆ ತರಬೇಕಾದ ದುಡಿಯುವ ವರ್ಗ ಜಾತಿ,ಮತ,ಜನಾಂಗೀಯ ಗೋಡೆಗಳನ್ನು ತಮ್ಮ ನಡುವೆ ಕಟ್ಟಿ ಕೊಂಡು ತನ್ನ ಚಾರಿತ್ರಿಕ ಕರ್ತವ್ಯ ನಿಭಾಯಿಸುವಲ್ಲಿ ವಿಫಲಗೊಂಡಿದೆ.ಇಂಥ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನೆಹರೂ ನೆನಪು ಚೇತೋಹಾರಿಯಾಗಿದೆ.



ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ನಂತರ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷಕ್ಕೆ ಬರುವವರು ಪಕ್ಷದ ಸಿದ್ಧಾಂತ ತಿಳಿದುಕೊಂಡು ಬರಬೇಕು, ಅಧಿಕಾರ ಸಿಗುತ್ತದೆ ಎಂದು ಬರಬಾರದು ಎಂದು ಹೇಳಿದರು.ತುಂಬಾ ತಡವಾಗಿ ಕಾಂಗ್ರೆಸ್ ಅಧ್ಯಕ್ಷರೊಬ್ಬರು ಈ ಮಾತು ಹೇಳಿದ್ದು ಕಾಂಗ್ರೆಸ್ಸಿನ ಎಷ್ಟು ಕಾರ್ಯಕರ್ತರಿಗೆ ತಲುಪಿತೋ ಗೊತ್ತಿಲ್ಲ.ಭಾರತದ ಮತ ನಿರಪೇಕ್ಷ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯಬೇಕೆಂದರೆ ಕಾಂಗ್ರೆಸ್ ಎಂಬ ಪಕ್ಷ ಇರಲೇಬೇಕು. ರಾಷ್ಟ್ರೀಯ ಮಟ್ಟದಲ್ಲಿ ಪ್ರತೀ ಹಳ್ಳಿಯಲ್ಲಿ ಬೇರು ಬಿಟ್ಟ,ಎಲ್ಲ ಜಾತಿ ಸಮುದಾಯಗಳನ್ನು ಒಳಗೊಂಡ ಕಾಂಗ್ರೆಸ್ ಉಳಿಯಬೇಕು. ಕಾಂಗ್ರೆಸ್ ಉಳಿಯಬೇಕಾದರೆ ಮತ್ತೆ ಮತ್ತೆ ಜವಾಹರಲಾಲ್ ನೆಹರೂ ಅವರನ್ನು ನೆನಪಿಸಿಕೊಂಡು ಅವರ ಸಾಹಿತ್ಯವನ್ನು ಕಾರ್ಯಕರ್ತರಿಗೆ ಓದಿಸಿ, ದೇಶಕ್ಕೆ ಅವರು ನೀಡಿರುವ ಕೊಡುಗೆಯನ್ನು ಮನೆ ಮನೆಗೆ ತಲುಪಿಸಬೇಕು.

ಭಾರತ ಎಂಬುದು ವಿಭಿನ್ನ ಜನ ಸಮುದಾಯಗಳಿಗೆ, ಭಾಷೆಗಳಿಗೆ, ಧರ್ಮಗಳಿಗೆ, ಸಂಸ್ಕೃತಿಗಳಿಗೆ ಆಸರೆ ನೀಡಿದ ಭೂ ಪ್ರದೇಶ. ಸ್ವಾತಂತ್ರ ನಂತರ ಒಂದು ದೇಶವಾಗಿ ಹೊರ ಹೊಮ್ಮಿದ ಇದರ ಬಹುತ್ವ ದ ಮಹತ್ವ ನೆಹರೂ ಅವರಿಗೆ ಗೊತ್ತಿತ್ತು. ಬ್ರಿಟಿಷರು ಹೋದ ನಂತರ ಇದನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಮಸಲತ್ತನ್ನು ಸಾವರ್ಕರ್, ಗೋಳ್ವಾಲ್ಕರ್ ಮಾಡಿದ್ದರು.ಇದಕ್ಕೆ ಪೂರಕವಾಗಿ ಭಾರತದ ವೇದ, ಪುರಾಣ, ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಸೇರಿದಂತೆ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಇಲ್ಲದ ಹಿಂದೂ ಎಂಬ ಪದದ ಸುತ್ತ ಒಂದು ಸಿದ್ಧಾಂತವನ್ನು ರೂಪಿಸಿದರು. ಈ ಸಿದ್ಧಾಂತದ ಮೂಲ ಭಾರತವಲ್ಲ. ಜರ್ಮನಿ ಮತ್ತು ಇಟಲಿ. ನಾಗಪುರದ ಶಿವರಾಮ ಮುಂಜೆ ಇಟಲಿಗೆ ಹೋಗಿ ಮುಸಲೋನಿಯನ್ನು ಭೇಟಿಯಾಗಿ ಅವನಿಂದ ಫ್ಯಾಶಿಸ್ಟ್ ಸಿದ್ಧಾಂತವನ್ನು, ಜರ್ಮನಿಯಿಂದ ಹಿಟ್ಲರನ ಮೂಲಕ ನಾಜಿ ಸಿದ್ಧಾಂತವನ್ನು ಎರವಲು ತಂದು ಹಿಂದುತ್ವ ದ ಬೀಜ ನೆಟ್ಟರು.

ಅಂತಲೇ ನೆಹರೂ ಮತ್ತು ಅವರ ಕುಟುಂಬದವರ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತ ಬಂದಿದ್ದಾರೆ. ಸ್ವಾತಂತ್ರ ನಂತರದ ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಕೊಡುಗೆಯ ಬಗ್ಗೆ ಇಂದಿನ ಪೀಳಿಗೆಗೆ ಗೊತ್ತಿಲ್ಲ. ಕೋಮುವಾದಿ ಗಳ ನಿರಂತರ ತೇಜೋವಧೆಯ ಅಬ್ಬರದಲ್ಲಿ ಸತ್ಯ ಹೊರಗೆ ಬಂದಿಲ್ಲ. ನೆಹರೂ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಕೂಡ ಮಾಡಲಿಲ್ಲ. ಖರ್ಗೆಯವರು ಹೇಳಿದಂತೆ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಸೇರಿದವರಿಗೆ ಸ್ವತಂತ್ರ ಭಾರತದ ಸಾಧನೆಗಳನ್ನು ಜನರಿಗೆ ವಿವರಿಸುವ ಆಸಕ್ತಿ ಇರಲಿಲ್ಲ.

ಹಿಂದುತ್ವದ ಹಿನ್ನೆಲೆಯನ್ನು ಮೊದಲು ಗುರುತಿಸಿ ಖಡಾಖಂಡಿತವಾಗಿ ವಿರೋಧಿಸಿದವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ. ಅವರು ಅಂದಿನಿಂದಲೇ ಈ ಷಡ್ಯಂತ್ರವನ್ನು ವಿರೋಧಿಸುತ್ತಾ ಬಂದರು.ಅಂತಲೇ ನೆಹರೂ ಕಂಡರೆ ಇವರಿಗೆ ಆಗುವುದಿಲ್ಲ.

ಸ್ವಾತಂತ್ರ ನಂತರ ಮೊದಲ ಹದಿನೇಳು ವರ್ಷಗಳ ಕಾಲಾವಧಿಯಲ್ಲಿ ನೆಹರೂ ಪ್ರಧಾನಿಯಾಗಿರದಿದ್ದರೆ ಭಾರತದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ.ನಮ್ಮ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿದ್ದರೆ ಅದರ ಶ್ರೇಯಸ್ಸು ನೆಹರೂ ಮತ್ತು ಅಂಬೇಡ್ಕರ್ ಅವರಿಗೆ ಸಲ್ಲಬೇಕು. ನರೇಂದ್ರ ಮೋದಿಯಂಥ ಒಬ್ಬ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ಪ್ರಧಾನಿಯಾಗುತ್ತಾರೆಂದರೆ ಅದು ಬಾಬಾಸಾಹೇಬರ ಸಂವಿಧಾನ ಮತ್ತು ನೆಹರೂ ಹಾಕಿದ ಜನತಾಂತ್ರಿಕ ಅಡಿಪಾಯ ಕಾರಣ. ಇದು ಮೋದಿಯವರಿಗೂ ಗೊತ್ತಿದೆ.ಆದರೆ ಅವರು ಒಪ್ಪಿ, ಆಯ್ಕೆ ಮಾಡಿಕೊಂಡ ರಾಜಕೀಯ ವಾಸ್ತವವನ್ನು ಒಪ್ಪಿಕೊಳ್ಳಲು ಬಿಡುವುದಿಲ್ಲ.

ಭಾರತದ ಸಾರ್ವಜನಿಕ ಉದ್ಯಮಗಳು,ಅಣೆಕಟ್ಟು ಗಳು, ಶಾಲೆ,ಕಾಲೇಜುಗಳು, ರೈಲು ಮಾರ್ಗಗಳು, ಆರೋಗ್ಯ ಕೇಂದ್ರಗಳು, ಸರಕಾರಿ ಆಸ್ಪತ್ರೆಗಳು, ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಇವೆಲ್ಲ 2014 ರ ನಂತರ ಒಮ್ಮ್ಮೆಲೇ ಧರೆಗಿಳಿದು ಬರಲಿಲ್ಲ. ಇವು ನೆಹರೂ ಪ್ರಧಾನಿಯಾದ ನಂತರ 1947 ರ ನಂತರ ಹಂತಹಂತವಾಗಿ ಸಾಕಾರಗೊಂಡ ಸಾಧನೆಗಳು.

ನೆಹರೂ ಅವರನ್ನು ಕಾರಣವಿಲ್ಲದೇ ಟೀಕಿಸುವವರು ಅವರು ಬರೆದ ಡಿಸ್ಕೃವರಿ ಆಫ್ ಇಂಡಿಯಾ ಮತ್ತು ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ ಪುಸ್ತಕಗಳನ್ನು ಓದಲಿ. ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕರ್ತರಿಗೆ ಈ ಪುಸ್ತಕಗಳ ಬಗ್ಗೆ ಅಧ್ಯಯನ ಶಿಬಿರಗಳನ್ನು ಏರ್ಪಡಿಸಲಿ.ಇದರ ಜೊತೆಗೆ ನೆಹರೂ ಅವರು ಜೈಲಿನಲ್ಲಿ ಇದ್ದಾಗ ಮಗಳು ಇಂದಿರಾ ಅವರಿಗೆ ಬರೆದ ಪತ್ರಗಳನ್ನು ಓದಲಿ. ಎಷ್ಟು ಸರಳವಾಗಿ ಜಗತ್ತಿನ, ಮನುಕುಲದ ಚರಿತ್ರೆಯನ್ನು ವಿವರಿಸಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರು ತಮ್ಮ ವಿಚಾರಕ್ಕೆ ಭಿನ್ನವಾದ ಸಾಹಿತ್ಯವನ್ನು ಓದುವುದಿಲ್ಲ. ಹೀಗಾಗಿ ಅವರ ಬೌದ್ಧ್ದಿಕ ಮಟ್ಟ ಇದ್ದಲ್ಲೇ ಇದ್ದು ಭಕ್ತರೆಂದು ಲೇವಡಿಗೆ ಒಳಗಾಗುತ್ತಾರೆ.
ನಮ್ಮ ಮಕ್ಕಳಿಗೆ ಬಾಬಾಸಾಹೇಬ ಅಂಬೇಡ್ಕರ್ ಅವರ ವೈಚಾರಿಕ ಸಾಹಿತ್ಯವನ್ನು, ನೆಹರೂ ಮತ್ತು ಗಾಂಧೀಜಿಯವರ ಬರಹಗಳನ್ನು ಓದಲು ಕೊಡಬೇಕು. ಆಗ ಅವರು ಬದಲಾಗುತ್ತಾರೆ.

ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಜವಾಹರಲಾಲ್ ನೆಹರೂ ಗೌರವಿಸುತ್ತಿದ್ದರು. ತಮ್ಮ ಕಟು ಟೀಕಾಕಾರರಾಗಿದ್ದ ಡಾ. ರಾಮ ಮನೋಹರ ಲೋಹಿಯಾ ಅವರು ಸದನದಲ್ಲಿ ಇರಬೇಕೆಂದು ಬಯಸುತ್ತಿದ್ದ ನೆಹರೂ ಅವರ ಮಾತುಗಳನ್ನು ಚಲಿಸುತ್ತಿದ್ದರು.ಕಮ್ಯುನಿಸ್ಟ್ ನಾಯಕರಾಗಿದ್ದ ಎಸ್.ಎ. ಡಾಂಗೆ, ಭೂಪೇಶ ಗುಪ್ತ ಮತ್ತು ಎ.ಕೆ.ಗೋಪಾಲನ್ ಅವರ ಬಗ್ಗೆ ಕೂಡ ನೆಹರೂ ಅಪಾರ ಗೌರವ ಹೊಂದಿದ್ದರು. ಭೂಪೇಶ ಗುಪ್ತ ಸದನದಲ್ಲಿ ಮಾತಾಡುತ್ತಾರೆಂದರೆ ಆ ದಿನ ನೆಹರೂ ತಪ್ಪದೇ ಸದನಕ್ಕೆ ಬಂದು ಅವರ ಭಾಷಣವನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು.ಸೈದ್ಧಾಂತಿಕವಾಗಿ ನೆಹರೂ ಅವರ ಕಡು ವಿರೋಧಿಯಾದ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ನೆಹರೂ ಬಗ್ಗೆ ಗೌರವ ಹೊಂದಿದ್ದರು.1977 ರಲ್ಲಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಾಜಪೇಯಿ ಅವರು ವಿದೇಶ ಮಂತ್ರಿಯಾಗಿದ್ದಾಗ ಅವರ ಅಧಿಕೃತ ಕೊಠಡಿಯಲ್ಲಿ ಇದ್ದ ನೆಹರೂ ಅವರ ಫೋಟೊ ಮಾಯವಾಗಿತ್ತು. ಇದರಿಂದ ಕೋಪಗೊಂಡ ವಾಜಪೇಯಿ ನೆಹರೂ ಫೋಟೊ ತೆಗೆದವರನ್ನು ತರಾಟೆಗೆ ತೆಗೆದುಕೊಂಡರು. ನೆಹರೂ ಫೋಟೊವನ್ನು ಮತ್ತೆ ತರಿಸಿ ಗೋಡೆಗೆ ಹಾಕಿಸಿದರು.

ಇಂಥ ನೆಹರೂ ಬಗ್ಗೆ ತಲೆಯಲ್ಲಿ ಮೆದುಳಿಲ್ಲದ ಭಕ್ತರು ಅಸಭ್ಯವಾಗಿ ಮಾತಾಡುತ್ತಾರೆ.ವಾಟ್ಸಪ್ ಯುನಿವರ್ಸಿಟಿ ಗಳಲ್ಲಿ ಅವರು ಪಡೆದ ತರಬೇತಿ ಅವರ ವಿವೇಕವನ್ನು ನಾಶ ಮಾಡಿದೆ.ಆದರೆ ಗಾಂಧಿ, ನೆಹರೂ ಸಿದ್ಧಾಂತವನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಏನಾಗಿದೆ? ಎಷ್ಟು ಜನ ಕಾಂಗ್ರೆಸ್ ಶಾಸಕರಿಗೆ ನೆಹರೂ ಬಗ್ಗೆ ಗೊತ್ತಿದೆ? ಇನ್ನಾದರೂ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಗಾಂಧಿ, ನೆಹರೂ, ಅಂಬೇಡ್ಕರ್ ಸಿದ್ಧಾಂತದ ಬಗ್ಗೆ ತಿಳುವಳಿಕೆ ನೀಡಲಿ.

ನೆಹರೂ ಪಕ್ಷದೊಳಗಿನವರ ಒತ್ತಡಕ್ಕೆ ಮಣಿದು ಮಾಡಿದ ಎರಡನೇ ತಪ್ಪು 1957 ರಲ್ಲಿ ಕೇರಳದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಇ.ಎಂ.ಎಸ್.ನಂಬೂದಿರಿ ಪಾಡ್ ಅವರ ನೇತೃತ್ವದ ಕಮ್ಯುನಿಸ್ಟ್ ಸರಕಾರ ವನ್ನು ಪದಚ್ಯುತಗೊಳಿಸಿದ್ದು.ಇಂಥ ಕೆಲ ಲೋಪಗಳನ್ನು ಹೊರತುಪಡಿಸಿದರೆ ನೆಹರೂ ಈ ದೇಶ ಕಂಡ ಮಹಾನ್ ನಾಯಕ.
 ಬಾಬಾಸಾಹೇಬ ಅಂಬೇಡ್ಕರ್ ಅವರು ಗಾಂಧಿ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರೂ ನೆಹರೂ ಅವರ ಬಗ್ಗೆ ಅವರಿಗೆ ಗೌರವವಿತ್ತು.ಸಂವಿಧಾನ ರಚನಾ ಕಾರ್ಯದಲ್ಲಿ ನೆಹರೂ ಸಂಪೂರ್ಣ ಸಹಕಾರ ನೀಡಿದರು. ನಂತರ ನೆಹರೂ ಸಂಪುಟದಲ್ಲಿ ಅಂಬೇಡ್ಕರ್ ಮಂತ್ರಿಯಾಗಿದ್ದಾಗಲೂ ಅವರ ಖಾತೆಯಲ್ಲಿ ನೆಹರೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಹಿಂದೂ ಕೋಡ್ ಬಿಲ್ ಬಗ್ಗೆ ಮಾತ್ರ ನೆಹರೂ ಅಸಹಾಯಕರಾದರು.ತಾತ್ವಿಕ ವಾಗಿ ಅಂಬೇಡ್ಕರ್ ನಿಲುವನ್ನು ಅವರು ಒಪ್ಪಿದ್ದರೂ ಕೂಡ ಅಂದಿನ ಸಂಸತ್ತಿನಲ್ಲಿ, ಸ್ವಂತ ಪಕ್ಷದಲ್ಲಿ ಸಂಪ್ರದಾಯವಾದಿಗಳನ್ನು ಎದುರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅದೇ ತಾನೇ ಸ್ವಾತಂತ್ರ ಬಂದಿತ್ತು.ಮುಂದೆ ಚುನಾವಣೆ ಇತ್ತು .ಹೀಗಾಗಿ ಅಂಬೇಡ್ಕರ್ ಪರವಾಗಿ ನಿಲ್ಲಲು ಆಗಲಿಲ್ಲ. ಆದರೆ ನಂತರ ಸಂಸತ್ತು ಇದನ್ನು ಅಂಗೀಕರಿಸಿತು.

ನೆಹರೂ - ಗಾಂಧಿ ಕುಟುಂಬವನ್ನು ದ್ವೇಷಿಸುವವರು ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟು ಕೊಳ್ಳಬೇಕು. ನೆಹರೂ ಆಗಲಿ ಇಂದಿರಾ ಆಗಲಿ ಜಾತಿ ಹೋಗಬೇಕೆಂದು ಕೇವಲ ವೇದಿಕೆಯಲ್ಲಿ ನಿಂತು ಮಾತಾಡಿದವರಲ್ಲ.ಸ್ವಂತ ಜೀವನದಲ್ಲಿ ಆಚರಣೆಗೆ ತಂದವರು.ಇಂದಿರಾ ಮದುವೆಯಾಗಿದ್ದು ಪಾರ್ಸಿ ಯುವಕ ಫಿರೋಜ್ ಗಾಂಧಿಯನ್ನು,ಇಂದಿರಾ ಪುತ್ರರಾದ ರಾಜೀವ್ ಮದುವೆಯಾಗಿದ್ದು ಇಟಲಿಯ ಸೋನಿಯಾರನ್ನು ಸಂಜಯ್ ಗಾಂಧಿ ವಿವಾಹವಾಗಿದ್ದು ಸಿಖ್ ಯುವತಿ ಮನೇಕಾರನ್ನು .ಇದೊಂದು ಜಾತಿಯ ಅಡ್ಡಗೋಡೆಯನ್ನು ಕೆಡವಿದ ಕುಟುಂಬ. ಜಾತಿ ರಹಿತ ಮದುವೆಯ ಬಸವಣ್ಣನವರ ಪರಿಕಲ್ಪನೆ ಯನ್ನು ಅನುಷ್ಠಾನಕ್ಕೆ ತಂದ ಮನೆತನ.ಜಾತಿಯ ಕೊಚ್ಚೆಯಲ್ಲಿ ಬಿದ್ದವರಿಗೆ ಇದನ್ನು ಸಹಿಸಲು ಆಗುತ್ತಿಲ್ಲ.ಅಸಭ್ಯ, ಅಸಹ್ಯ ಭಾಷೆಯಲ್ಲಿ ಅವರನ್ನು ನಿಂದಿಸುತ್ತಾರೆ.

ಇಷ್ಟೇ ಅಲ್ಲ ಈ ಕುಟುಂಬ ದ ಮೂವರು ಬಹುತ್ವ ಭಾರತಕ್ಕಾಗಿ ಹುತಾತ್ಮರಾದರು.ಭಾರತದ ಐಕ್ಯತೆ,ಸಮಗ್ರತೆಯನ್ನು ಉಳಿಸಲು ಬಿಂದ್ರನ್‌ವಾಲೆಯ ಮತಾಂಧತೆ ವಿರುದ್ಧ ದಿಟ್ಟ ಕ್ರಮವನ್ನು ಕೈಗೊಂಡು ಇಂದಿರಾ ಗಾಂಧಿ ಸಿಖ್ ಅಂಗರಕ್ಷಕರ ಗುಂಡಿಗೆ ಬಲಿಯಾದರು. ನಲವತ್ತನೇ ವಯಸ್ಸಿನಲ್ಲಿ ಸೋನಿಯಾ ಗಾಂಧಿ ಪತಿ ರಾಜೀವ್ ಗಾಂಧಿಯವರನ್ನು ಕಳೆದುಕೊಂಡರು. ಈಳಂ ಮಾನವ ಬಾಂಬ್ ಗೆ ರಾಜೀವ್ ಬಲಿಯಾದರು. ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಹೋದರು.ಆದರೂ ತನ್ನ ಪತಿಯನ್ನು ಕೊಂದವರನ್ನು ಕ್ಷಮಿಸಿದ ಸೋನಿಯಾ ಗಾಂಧಿ ಹಂತಕರ ಬಿಡುಗಡೆಗೆ ಮನವಿ ಮಾಡಿದರು. ಇತ್ತೀಚೆಗೆ ಅವರು ಬಿಡುಗಡೆಯಾಗಿ ಹೊರ ಬಂದರು.ಇಂಥ ತ್ಯಾಗ, ಬಲಿದಾನ ಮಾಡಿದ ಕುಟುಂಬದ ಬಗ್ಗೆ ಹಗುರಾಗಿ ಮಾತಾಡುವವರು,ಅವರ ಮಾತನ್ನು ನಿಜವೆಂದು ನಂಬಿ ಕೊಳಕು ಮಾತಾಡುವವರು ಇತಿಹಾಸದ ಪುಟಗಳನ್ನು ಒಮ್ಮೆ ಓದಲಿ.

ಚಾಚಾ ನೆಹರೂ ಹೆಸರನ್ನು ಅಳಿಸಿ ಹಾಕುವ ರೋಗಗ್ರಸ್ತ ಮನಸ್ಸುಗಳಿಗೆ ತುರ್ತಾಗಿ ಚಿಕಿತ್ಸೆ ಬೇಕಾಗಿದೆ. ನೆಹರೂ ಪರಿಕಲ್ಪನೆಯ ಜನತಾಂತ್ರಿಕ ಸಮಾಜವಾದಿ ಆರ್ಥಿಕ ಅಭಿವೃದ್ಧಿ ಮಾರ್ಗದಿಂದ ಜಗತ್ತು ಮತ್ತು ಭಾರತ ಸಾಕಷ್ಟು ದೂರ ಬಂದಿವೆ.
ನೆಹರೂ ಅವರಿಗೆ ಸ್ಫೂರ್ತಿ ನೀಡಿದ ಸೋವಿಯತ್ ಸಮಾಜವಾದಿ ವ್ಯವಸ್ಥೆ ಯಾವಾಗ ಕುಸಿದು ಬಿತ್ತೋ ಆಗಲೇ ವಿಶ್ವದ ರಾಜಕೀಯ,ಆರ್ಥಿಕ ಅಭಿವೃದ್ಧಿ ಮಾರ್ಗದ ದಿಕ್ಕು ಬದಲಾಯಿತು. ಇದನ್ನು ಮತ್ತೆ ಸರಿ ದಾರಿಗೆ ತರಬೇಕಾದ ದುಡಿಯುವ ವರ್ಗ ಜಾತಿ,ಮತ,ಜನಾಂಗೀಯ ಗೋಡೆಗಳನ್ನು ತಮ್ಮ ನಡುವೆ ಕಟ್ಟಿ ಕೊಂಡು ತನ್ನ ಚಾರಿತ್ರಿಕ ಕರ್ತವ್ಯ ನಿಭಾಯಿಸುವಲ್ಲಿ ವಿಫಲಗೊಂಡಿದೆ.ಇಂಥ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನೆಹರೂ ನೆನಪು ಚೇತೋಹಾರಿಯಾಗಿದೆ.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X