VIDEO- ಬಾದಾಮಿ ನನಗೆ ದೂರ, ಕೋಲಾರ ಹತ್ತಿರ...: ಸಿದ್ದರಾಮಯ್ಯ
ಕೋಲಾರ: 'ಇಲ್ಲಿನ ಮುಖಂಡರುಗಳು ಒಂದು ದಿನ ನೀವು ಕೋಲಾರಕ್ಕೆ (Kolar) ಬರಬೇಕು ಅಂತ ಸೂಚಿಸಿದ್ದರು. ಎಲ್ಲರ ಒತ್ತಾಸೆ ಇರುವುದರಿಂದ ಕೋಲಾರದಿಂದ ಸ್ಪರ್ಧಿಸಲ್ಲ ಅಂತ ಹೇಳಕ್ಕಾಗಲ್ಲ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಸೋಮವಾರ ಕೋಲಾರದ ಚೌಡೇನಹಳ್ಳಿಯಲ್ಲಿರುವ ಕೃಷ್ಣ ಬೈರೇಗೌಡರ ತೋಟದ ಮನೆಯ ಆವರಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಸಿದ್ದರಾಮಯ್ಯ ಮಾತನಾಡಿದರು.
''ನನಗೆ ಯಾವುದೇ ಕ್ಷೇತ್ರದಿಂದ ನಿಲ್ಲಲು ಅಂಜಿಕೆ ಇಲ್ಲ. ಬಾದಾಮಿಯವರು ಇಲ್ಲೇ ನಿಲ್ಲಬೇಕು ಎಂದು ಹೇಳುತ್ತಾರೆ. ಬಾದಾಮಿ ನನಗೆ ಸ್ವಲ್ಪ ದೂರ ಇರುವುದರಿಂದ ಸಮಸ್ಯೆ. ಕೋಲಾರ ಬೆಂಗಳೂರಿಗೆ ಹತ್ತಿರ ಇದೆ'' ಎಂದು ತಿಳಿಸಿದರು.
''ಬಾದಾಮಿಯಲ್ಲಿ ನಿಲ್ಲುವುದು ರೂಲ್ಡ್ ಔಟ್. ಹೈಕಮಾಂಡ್ ವರುಣಾ, ಕೋಲಾರ ಎಲ್ಲಿ ನಿಲ್ಲಿ ಎಂದು ಹೇಳುತ್ತದೋ ಅಲ್ಲಿ ನಿಲ್ಲುತ್ತೇನೆ. ಹೈಕಮಾಂಡ್ ಕೋಲಾರದಿಂದ ನಿಲ್ಲಿ ಅಂದರೆ ಇಲ್ಲೇ ನಾಮಪತ್ರ ಸಲ್ಲಿಸಬೇಕು ಅಲ್ವಾ?'' ಎಂದರು.
Next Story