ಭಾರತ ಸೇವಾದಳದಿಂದ ನೆಹರೂ ಜಯಂತಿ ಆಚರಣೆ

ಮಂಗಳೂರು : ಭಾರತ ಸೇವಾದಳದ ವತಿಯಿಂದ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆಯು ಸೋಮವಾರ ನಗರದ ಪಾಂಡೇಶ್ವರದಲ್ಲಿ ನಡೆಯಿತು. ನೆಹರೂ ಪ್ರತಿಮೆಗೆ ಪುಷ್ಪಾ ರ್ಚನೆಗೈಯಲಾಯಿತು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ ದೇಶದ ಸ್ವಾತಂತ್ರ್ಯದ ಹೋರಾಟ ದಲ್ಲಿ ನೆಹರೂ ಮುಂಚೂಣಿಯಲ್ಲಿದ್ದರು. ಪ್ರಥಮ ಪ್ರಧಾನಿಯಾಗಿ ಅವರು ದೇಶಕ್ಕೆ ದಕ್ಷ ಆಡಳಿತ ನೀಡಿದ್ದರು. ಪಂಚ ವಾರ್ಷಿಕ ಯೋಜನೆಗಳನ್ನು ರೂಪಿಸಿದ್ದರು. ಮಕ್ಕಳೆಂದರೆ ಅವರಿಗೆ ಬಹಳಷ್ಟು ಪ್ರೀತಿ. ಆದ್ದರಿಂದ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಸೇವಾದಳಕ್ಕೆ ನೆಹರೂ ವಿಶೇಷ ಪ್ರಾತಿನಿದ್ಯ ಕೊಟ್ಟಿದ್ದರು. ಅದಕ್ಕೆ ಪೂರಕವಾಗಿ ಹೆಚ್ಚಿನ ವಿದ್ಯಾರ್ಥಿಗಳು ಸೇವಾದಳಕ್ಕೆ ಸೇರ್ಪಡೆಗೊಂಡು ದೇಶ ಸೇವೆ ಮತ್ತು ದೇಶ ಪ್ರೇಮದ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಸ್.ಬಿ. ಜಯರಾಮ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಸದಸ್ಯ ಬಶೀರ್ ಬೈಕಂಪಾಡಿ, ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಶೋಭಾ ಕೇಶವ್, ಕೃತಿನ್ ಕುಮಾರ್, ಶಿಕ್ಷಕಿಯರಾದ ಸುಮಾ, ಹರೀಣಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್ ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ಉದಯ ಕುಂದರ್ ವಂದಿಸಿ ದರು. ಸಂಘಟಕ ಮಂಜೇಗೌಡ ಕಾರ್ಯಕ್ರಮ ನಿರೂಪಿಸಿದರು.