'ಸಚಿವರು ಕಾಣೆಯಾಗಿದ್ದಾರೆ' ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ : ರೈತನ ಬಂಧನ

ಬಾಗಲಕೋಟೆ, ನ.14: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಅವರು ಕಾಣೆಯಾಗಿದ್ದಾರೆ, ಮೌನವಾಗಿದ್ದಾರೆ ಎಂದು ಉಲ್ಲೇಖಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದ ಆರೋಪದಡಿ ರೈತರೊಬ್ಬರನ್ನು ನವನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮುಧೋಳ ತಾಲೂಕಿನ ಶಿರೋಳ ಗ್ರಾಮದ ನಿಂಗಪ್ಪ ಮಟಗಾರ ಬಂಧಿತ ರೈತ ಎಂದು ತಿಳಿದುಬಂದಿದೆ.
ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಮುಧೋಳದಲ್ಲಿ ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಿಂಗಪ್ಪ ಅವರು, ಸಚಿವರು, ಶಾಸಕರು ಕಾಣೆಯಾಗಿ, ಮೌನವಾಗಿದ್ದಾರೆ. ಎಲ್ಲಿರುವೆ ಗೋವಿಂದ ಬಾರೋ ಮನೆಗೆ ಎಂದು ಫೇಸ್‍ಬುಕ್‍ನಲ್ಲಿ ಟೀಕಿಸಿ ಪೋಸ್ಟ್ ಮಾಡಿದ್ದರು. ಈ ಸಂಬಂಧ ಕ್ರಮಕೈಗೊಳ್ಳುವಂತೆ ಶಿವಾನಂದ ಟವಳಿ ಎಂಬುವವರು ದೂರು ನೀಡಿದ್ದರು.
ಈ ದೂರಿನ್ವಯ ನವನಗರ ಠಾಣೆಯ ಪೊಲೀಸರು ರವಿವಾರ ರಾತ್ರಿ ರೈತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನನಗೆ ಹೆಚ್ಚು ವರ್ಷ ಬದುಕಿ, ಹೆಚ್ಚು ಹೆಚ್ಚು ಜನರ ಸೇವೆ ಮಾಡಬೇಕೆಂಬ ಆಸೆ: ಸಿದ್ದರಾಮಯ್ಯ
Next Story