ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: ಅಚಂತ ಶರತ್ ಕಮಲ್‌ಗೆ 'ಖೇಲ್‌ರತ್ನ'
ನಿಖತ್ ಝರೀನ್ ಸಹಿತ 25 ಕ್ರೀಡಾಗಳುಗಳಿಗೆ ಅರ್ಜುನ ಪ್ರಶಸ್ತಿ
ನಿಖತ್ ಝರೀನ್ ಸಹಿತ 25 ಕ್ರೀಡಾಗಳುಗಳಿಗೆ ಅರ್ಜುನ ಪ್ರಶಸ್ತಿ
ಹೊಸದಿಲ್ಲಿ: 2022ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಸೋಮವಾರ ಪ್ರಕಟಿಸಲಾಗಿದ್ದು, ಭಾರತದ ಹಿರಿಯ ಟೇಬಲ್ ಟೆನಿಸ್ ತಾರೆ ಅಚಂತ ಶರತ್ ಕಮಲ್ ದೇಶದ ಅತ್ಯುನ್ನತ ಕ್ರೀಡಾ ಗೌರವ ಮೇಜರ್ ಧ್ಯಾನ್ ಚಂದ್ 'ಖೇಲ್‌ರತ್ನ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಮಲ್ 4 ಪದಕಗಳನ್ನು ಜಯಿಸಿದ್ದರು.
ಮಹಿಳಾ ಬಾಕ್ಸರ್ ನಿಖತ್ ಝರೀನ್, ಸೀಮಾ ಪುನಿಯಾ, ಲಕ್ಷ ಸೇನ್ ಸಹಿತ 25 ಕ್ರೀಡಾಳುಗಳು ಈ ವರ್ಷದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನ.30ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
Next Story