ನೆಹರು ಯುವ ಕೇಂದ್ರ ಸಂಸ್ಥಾಪಕ ದಿನಾಚರಣೆ

ಮಂಗಳೂರು : ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ನೆಹರೂ ಅಧ್ಯಯನ ಕೇಂದ್ರ, ಸರಕಾರಿ ಪದವಿಪೂರ್ವ ಕಾಲೇಜು ಹಂಪನಕಟ್ಟೆ, ಕೇಸರಿ ಫ್ರೆಂಡ್ಸ್ ಗಣೇಶಪುರ ಇವುಗಳ ಜಂಟಿ ಆಶಯದಲ್ಲಿ ನೆಹರೂ ಯುವ ಕೇಂದ್ರ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವು ಸೋಮವಾರ ನಡೆಯಿತು.
ಡಿಡಿಪಿಯು ಜಯಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ವಿನ್ಸೆಂಟ್ ಮಸ್ಕರೇನ್ಹಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನೆಹರೂ ಅಧ್ಯಯನ ಕೇಂದ್ರದ ನಿರ್ದೇಶಕ ರಾಜರಾಮ್ ತೋಳ್ಪಾಡಿ ಭಾಗವಹಿಸಿದ್ದರು.
ಯುವ ಕೇಂದ್ರದ ಜಿಲ್ಲಾ ಅಧಿಕಾರಿ ರಘುವೀರ್ ಸೂಟರ್ ಪೇಟೆ ಮಾತನಾಡಿ ಯುವಜನರು ಮಹಾನ್ ವ್ಯಕ್ತಿಗಳ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನೆಹರು ಯುವ ಕೇಂದ್ರದ ವಿವಿಧ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದ ವಿದ್ಯಾರ್ಥಿ ಹಿತೇಶ್ ಸೂಟರ್ ಪೇಟೆ ಅವರಿಗೆ ಪ್ರಶಂಶಾ ಪತ್ರವನ್ನು ವಿತರಿಸಲಾಯಿತು. ನೆಹರೂ ಯುವ ಕೇಂದ್ರದ ಆಡಳಿತ ಅಧಿಕಾರಿ ಜಗದೀಶ್ ಕೆ, ಕೇಸರಿ ಯುವಕ ಮಂಡಲದ ಅಧ್ಯಕ್ಷ ಪುನೀತ್ ಉಪಸ್ಥಿತರಿದ್ದರು. ರಕ್ಷಾ ಸ್ವಾಗತಿಸಿದರು. ರೋಶನ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.







