ಕೆನಡಾ: ಖಾಯಂ ನಿವಾಸಿಗಳಿಗೆ ಸೇನೆಗೆ ಸೇರಲು ಅವಕಾಶ

ಟೊರಂಟೊ, ನ.14: ಖಾಯಂ ನಿವಾಸಿಗಳು ಮಿಲಿಟರಿ (Military)ಸೇರ್ಪಡೆಗೆ ಅರ್ಹರು ಎಂದು ಕೆನಡಾದ ಸಶಸ್ತ್ರ ಪಡೆ(ಸಿಎಎಫ್) ಘೋಷಿಸಿದೆ. ಕೆನಡಾದ ಖಾಯಂ ನಿವಾಸಿಗಳಲ್ಲಿ ಭಾರತೀಯರು ದೊಡ್ಡ ಪ್ರಮಾಣದಲ್ಲಿದ್ದಾರೆ.
ಸೇನೆಯಲ್ಲಿ ಖಾಲಿಬಿದ್ದಿರುವ ಸಾವಿರಾರು ಹುದ್ದೆಗಳಿಗೆ ಹೊಸಬರನ್ನು ಸೇರ್ಪಡೆಗೊಳಿಸಲು ಕೆನಡಾದ ಸೇನೆ ಹೆಣಗಾಡುತ್ತಿರುವ ಸಂದರ್ಭದಲ್ಲೇ ಈ ಘೋಷಣೆ ಹೊರಬಿದ್ದಿದೆ. 2021ರ ಅಂಕಿಅಂಶದ ಪ್ರಕಾರ, ಕೆನಡಾದಲ್ಲಿ 8 ದಶಲಕ್ಷಕ್ಕೂ ಅಧಿಕ ವಲಸೆ ಬಂದವರಿದ್ದು ಇದು ಕೆನಡಾದ ಜನಸಂಖ್ಯೆಯ 21.5%ದಷ್ಟಾಗಿದೆ. ಇದೇ ವರ್ಷ ಸುಮಾರು 1 ಲಕ್ಷ ಭಾರತೀಯರು ಕೆನಡಾದ ಖಾಯಂ ನಿವಾಸಿಗಳ ಸ್ಥಾನಮಾನ ಪಡೆದಿದ್ದಾರೆ. 2022 ಮತ್ತು 2024ರ ನಡುವಿನ ಅವಧಿಯಲ್ಲೂ 1 ದಶಲಕ್ಷಕ್ಕೂ ಅಧಿಕ ಮಂದಿ ಹೊಸದಾಗಿ ಖಾಯಂ ನಿವಾಸಿಗಳ ಸ್ಥಾನಮಾನ ಪಡೆಯಲಿದ್ದಾರೆ ಎಂದು ಅಂಕಿಅಂಶ ತಿಳಿಸಿದೆ.
Next Story