ಸಂಪತ್ತಿನ ಬಹುಪಾಲು ದಾನಕ್ಕೆ ಅಮಝಾನ್ ಸ್ಥಾಪಕ ಜೆಫ್ ಬೆಝೋಸ್ ನಿರ್ಧಾರ

ನ್ಯೂಯಾರ್ಕ್, ನ.14: ತನ್ನಲ್ಲಿರುವ 124 ಶತಕೋಟಿ ಡಾಲರ್ ಮೌಲ್ಯದ ಸಂಪತ್ತಿನ ಬಹುಪಾಲನ್ನು ಜೀವಿತಾವಧಿಯಲ್ಲಿಯೇ ದಾನ ನೀಡುವುದಾಗಿ ಅಮಝಾನ್ ಸ್ಥಾಪಕ ಜೆಫ್ ಬೆಝೋಸ್(Jeff Bezos) ಹೇಳಿದ್ದಾರೆ.
ತಾನು ನೀಡಲಿರುವ ದೇಣಿಗೆಯ ಬೃಹತ್ ಪ್ರಮಾಣ ಹವಾಮಾನ ಬದಲಾವಣೆ ಸಮಸ್ಯೆಯ ಎದುರಿಗಿನ ಹೋರಾಟಕ್ಕೆ ನೆರವಾಗುವ ನಿಧಿಗೆ ಸಲ್ಲಲಿದೆ. ಜಗತ್ತಿನ ಎಲ್ಲೆಡೆ ವ್ಯಾಪಕವಾಗಿರುವ ಸಾಮಾಜಿಕ ಮತ್ತು ಆರ್ಥಿಕ ವಿಭಜನೆಗಳ ನಡುವೆ, ಮನುಕುಲದ ಏಕತೆಗೆ ಕೆಲಸ ಮಾಡುವ ಜನರಿಗೆ ನೆರವಾಗಲೂ ದೇಣಿಗೆ ನೀಡಲು ಉದ್ದೇಶಿಸಿದ್ದೇನೆ ಎಂದವರು ಹೇಳಿದ್ದಾರೆ. ಜಗತ್ತಿನಾದ್ಯಂತದ ಶ್ರೀಮಂತ ಉದ್ಯಮಿಗಳು ತಮ್ಮ ಸಂಪತ್ತಿನಲ್ಲಿ ದತ್ತಿ ಸಂಸ್ಥೆಗಳಿಗೆ ದೇಣಿಗೆ ಘೋಷಿಸುತ್ತಿದ್ದರೂ ಜೆಫ್ ಬೆಜೋಸ್ ಇಂತಹ ಉಪಕ್ರಮಗಳಿಗೆ ಮುಂದಾಗುತ್ತಿಲ್ಲ ಎಂದು ವ್ಯಾಪಕ ಟೀಕೆ ಕೇಳಿಬರುತ್ತಿರುವ ಮಧ್ಯೆ ಬೆಝೋಸ್ ಈ ನಿರ್ಧಾರ ಪ್ರಕಟಿಸಿದ್ದಾರೆ.
Next Story