10,000 ಉದ್ಯೋಗ ಕಡಿತಕ್ಕೆ ಅಮೆಝಾನ್ ಸಜ್ಜು: ವರದಿ.

ಹೊಸದಿಲ್ಲಿ: ಕಳೆದ ಕೆಲವು ತ್ರೈಮಾಸಿಕಗಳು ಲಾಭದಾಯಕವಾಗಿಲ್ಲದ ಕಾರಣ ಅಮೆಝಾನ್(Amazon) ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಹಾಗೂ ವೆಚ್ಚ ಕಡಿತ ಕ್ರಮಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ವಾರದಿಂದಲೇ ಕಂಪನಿಯು 10,000 ಉದ್ಯೋಗಿಗಳನ್ನು ವಜಾ ಮಾಡಬಹುದು ಎಂದು ನ್ಯೂಯಾರ್ಕ್ ಟೈಮ್ಸ್(The New York Times) ವರದಿ ಮಾಡಿದೆ.
ಜಾಗತಿಕವಾಗಿ 1.6 ಮಿಲಿಯನ್ಗಿಂತಲೂ ಹೆಚ್ಚು ಉದ್ಯೋಗಿಗಳನ್ನು ಅಮೆಝಾನ್ ಹೊಂದಿದ್ದು, 10 ಸಾವಿರ ಉದ್ಯೋಗ ಕಡಿತ ಮಾಡಿದರೆ, ಅದರ ಇತಿಹಾಸದಲ್ಲೇ ಅತೀ ಹೆಚ್ಚು ಉದ್ಯೋಗ ಕಡಿತಗೊಳಿಸುವಿಕೆ ಇದಾಗಿರಲಿದೆ.
ಅಮೆಜಾನ್, ಈಗಾಗಲೇ ಕೆಲವು ಲಾಭದಾಯಕವಲ್ಲದ ಘಟಕಗಳಲ್ಲಿನ ಉದ್ಯೋಗಿಗಳಿಗೆ ಕಂಪನಿಯೊಳಗೆ ಇತರ ಅವಕಾಶಗಳನ್ನು ಹುಡುಕುವಂತೆ ಎಚ್ಚರಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್(The Wall Street Journal) ವರದಿ ಮಾಡಿದೆ.
Next Story