ನ.16ರಂದು ಯಕ್ಷಗಾನ ಕಲಾರಂಗದ 35, 36ನೇ ಮನೆ ಉದ್ಘಾಟನೆ

ಉಡುಪಿ, ನ.15: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಪ್ರವರ್ತಕ ಎಚ್.ಎಸ್.ಶೆಟ್ಟಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ಬೊಮ್ಮರಬೆಟ್ಟುವಿನ ಮಂಜುಶ್ರೀ (ದ್ವಿತೀಯ ಪಿಯುಸಿ) ಹಾಗೂ ಅಲ್ತಾರಿನ ಪೂರ್ಣಿಮಾ (ದ್ವಿತೀಯ ಪಿಯುಸಿ) ಇವರಿಗೆ ನಿರ್ಮಿಸಲಾದ ನೂತನ ಮನೆ ‘ರಾಜೀವಸದನ’ದ ಉದ್ಘಾಟನೆ ನ.16ರ ಬುಧವಾರ ನಡೆಯಲಿದೆ.
ಎಚ್.ಎಸ್.ಶೆಟ್ಟಿ ಈ ಮನೆಗಳನ್ನು ಉದ್ಘಾಟಿಸಲಿರುವರು. ಟ್ರಸ್ಟ್‌ನ ಉಪಾಧ್ಯಕ್ಷ ರಾದ ಎಚ್.ನಾಗರಾಜ ಶೆಟ್ಟಿ ಉಪಸ್ಥಿತರಿರುವರು. ಇದು ಸಂಸ್ಥೆ ದಾನಿಗಳ ನೆರನಿಂದ ನಿರ್ಮಿಸಿದ 35 ಮತ್ತು 36ನೇಯ ಮನೆಯಾಗಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





