ಉಡುಪಿ: ತಾಯಿ-ಮಕ್ಕಳ ಆಸ್ಪತ್ರೆಯಿಲ್ಲಿ ನವಜಾತ ಶಿಶುವಾರ ಕಾರ್ಯಕ್ರಮ

ಉಡುಪಿ, ನ.15: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುವಾರ ಕಾರ್ಯಕ್ರಮ ಇಂದು ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ನಾಗಭೂಷಣ ಉಡುಪ ಕಾರ್ಯಕ್ರಮ ಉದ್ಘಾಟಿಸಿ, ಆರೋಗ್ಯವಂತ ಶಿಶುವಿನಿಂದ ಆರೋಗ್ಯವಂತ ಕುಟುಂಬ, ಆರೋಗ್ಯವಂತ ಸಮಾಜ ಹಾಗೂ ಆರೋಗ್ಯವಂತ ದೇಶ ನಿರ್ಮಿಸಲು ಸಾಧ್ಯ ಎಂದರು.
ಮಕ್ಕಳ ತಜ್ಞ ಡಾ.ವೇಣುಗೋಪಾಲ್ ಮಾತನಾಡಿ,ಮಕ್ಕಳಿಗೆ ಹುಟ್ಟಿದ ತಕ್ಷಣ ಅರ್ಧ ಗಂಟೆಯೊಳಗೆ ಎದೆಹಾಲು ನೀಡಬೇಕು. ಆರು ತಿಂಗಳ ಕಾಲ ಎದೆಹಾಲು ಅಲ್ಲದೇ ಬೇರೆ ಯಾವ ಆಹಾರವನ್ನೂ ನೀಡಬಾರದು ಎಂದು ಮಗುವಿನ ಆರೈಕೆ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜ್‌ಗೋಪಾಲ್ ಭಂಡಾರಿ, ಅರವಳಿಕೆ ತಜ್ಞ ಡಾ.ಸೂರ್ಯನಾರಾಯಣ್, ಮಕ್ಕಳ ತಜ್ಞ ಡಾ.ಮಹಾದೇವ ಭಟ್, ವೈದ್ಯಾಧಿಕಾರಿ ಡಾ ಉಷಾ, ಪ್ರಭಾರ ಉಪ ಜಿಲ್ಲಾ ಶಿಕ್ಷಣಾಧಿಕಾರಿ ಚಂದ್ರಕಲಾ, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಪ್ರಭಾರ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಲತಾ ನಾಯಕ್ ಸ್ವಾಗತಿಸಿ, ಲಕ್ಷ್ಮೀ ನಿರೂಪಿಸಿದರು. ಡಾ.ಅಮರನಾಥ ಶಾಸ್ತ್ರಿ ವಂದಿಸಿದರು.







