ಲ್ಯಾಪ್‌ಟಾಪ್ ಕಳವು: ದೂರು

ಮಂಗಳೂರು: ನಗರದ ಬಜಾಲ್ ಬಳಿಯ ಪಿಜಿಯೊಂದರಿಂದ ಲ್ಯಾಪ್‌ಟಾಪ್ ಕಳವಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಸನ ಜಿಲ್ಲೆಯ ವಸಂತ್ ಕುಮಾರ್ ಎಂಬವರು ಪ್ರಸ್ತುತ ಬಜಾಲ್ ಬಳಿಯ ಸುರಭಿ ಪಿಜಿಯ ರೂಮ್‌ನಲ್ಲಿ ಕಳೆದ 2 ವರ್ಷಗಳಿಂದ ವಾಸವಾಗಿದ್ದರು. ವಸಂತ್ ಕುಮಾರ್‌ಗೆ ಕಂಪನಿ ಕೆಲಸದ ನಿಮಿತ್ತ ಲ್ಯಾಪ್‌ಟಾಪ್ ನೀಡಿತ್ತು. ನ.9ರಂದು ಸಂಜೆ ಅಂದಾಜು 35 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್ ಪಿಜಿಯಲ್ಲಿಟ್ಟು ಹೇರ್ ಕಟ್ಟಿಂಗ್ ಶಾಪ್‌ಗೆ ತೆರಳಿದ್ದರು. ರಾತ್ರಿ 8.10ಕ್ಕೆ ಪಿಜಿಗೆ ಬಂದಾಗ ಲ್ಯಾಪ್‌ಟಾಪ್ ಕಳವಾಗಿರುವುದು ತಿಳಿದು ಬಂತು ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story