ಅಂಗನವಾಡಿ ಕಾರ್ಯಕರ್ತೆಯ ಚಿನ್ನಾಭರಣ ಕಳವು: ಆರೋಪಿ ಸೆರೆ

ಮಂಗಳೂರು: ನಗರದ ಸಭಾಂಗಣವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯ ಚಿನ್ನಾಭರಣವಿದ್ದ ಕೈಚೀಲ (ಹ್ಯಾಂಡ್‌ಬ್ಯಾಗ್)ವನ್ನು ಕಳವುಗೈದಿದ್ದ ಆರೋಪಿಯನ್ನು ಕಾವೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮೂಲತಃ ಮೂಡುಶೆಡ್ಡೆ ನಿವಾಸಿಯಾಗಿದ್ದು, ಪ್ರಸ್ತುತ ಮಂಗಳಾದೇವಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಕೇಶ್ ಬಂಧಿತ ಆರೋಪಿ.
ನ.14ರಂದು ಕಾವೂರು ವ್ಯವಸಾಯ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಚಿನ್ನಾಭರಣ ಮತ್ತು ಮೊಬೈಲ್ ಇದ್ದ ಹ್ಯಾಂಡ್ ಬ್ಯಾಗ್‌ನ್ನು ಸಭಾಂಗಣದಲ್ಲಿರುವ ಕುರ್ಚಿಯಲ್ಲಿಟ್ಟಿದ್ದರು. ಆರೋಪಿ ಕಾರ್ಯಕ್ರಮ ವೀಕ್ಷಿಸುವ ನೆಪದಲ್ಲಿ ಬಂದು ಹ್ಯಾಂಡ್ ಬ್ಯಾಗ್ ಕಳವು ಮಾಡಿದ್ದ ಎಂದು ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.
ಅದರಂತೆ ಪೊಲೀಸರು ಆರೋಪಿಯನ್ನು ಮಂಗಳವಾರ ಬಂಧಿಸಿ ಚಿನ್ನಾಭರಣ, ಮೊಬೈಲ್ ಸಹಿತ 65000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾವೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗುರುರಾಜ್, ಎಸ್ಸೈ ಪ್ರತಿಭಾ, ಎಚ್‌ಸಿಗಳಾದ ಸಂತೋಷ್ ಸಿ.ಜಿ, ಕಿಶೋರ್, ಸಂಬಾಜಿ ಕದಂ, ಪಿಸಿಗಳಾದ ಮಲ್ನಗೌಡ, ಶ್ರೀಧರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.