ಉಪಗ್ರಹ ಉಡಾವಣೆ ಬಳಿಕ ಒಡೆದು ಚೂರಾದ ಚೀನಾದ ರಾಕೆಟ್

ವಾಷಿಂಗ್ಟನ್, ನ.15: ಯುವಾನ್ಹೈ ಉಪಗ್ರಹ(Yuanhai satellite)ವನ್ನು ಕಕ್ಷೆಗೆ ರವಾನಿಸಿದ ಚೀನಾದ ರಾಕೆಟ್ ಭೂಮಿಯ ಮೇಲ್ಮೈಯ 500 ಕಿ.ಮೀ ಎತ್ತರದಲ್ಲಿ ಒಡೆದುಹೋಗಿದ್ದು ಅಂತರಿಕ್ಷದಲ್ಲಿ ಮೋಡದಂತೆ ಹರಡಿದ ತ್ಯಾಜ್ಯವನ್ನು ಸೃಷ್ಟಿಸಿದೆ ಎಂದು `ಫೋಬ್ರ್ಸ್' (``Fobbers'')ವರದಿ ಮಾಡಿದೆ.
ನವೆಂಬರ್ 12ರಂದು ರಾಕೆಟ್ ಬಾಹ್ಯಾಕಾಶಕ್ಕೆ ಜಿಗಿದಿದೆ. ಆದರೆ ಈ ಕಾರ್ಯ ನಿಗದಿತ ಯೋಜನೆಯಂತೆ ಸಾಗಲಿಲ್ಲ. ಉಪಗ್ರಹವನ್ನು ಕಕ್ಷೆಗೆ ದೂಡಿದ ಬಳಿಕ ರಾಕೆಟ್ನ ಮೇಲಿನ ಹಂತ ಒಡೆದು ಹೋಗಿದ್ದು ಭೂಮಿಯ ಕೆಳಕಕ್ಷೆಯಲ್ಲಿ ಬಾಹ್ಯಾಕಾಶ ಅವಶೇಷಗಳ ಬೆದರಿಕೆಯನ್ನು ಹೆಚ್ಚಿಸಿದೆ ಎಂದು ವರದಿ ಹೇಳಿದೆ.
ರಾಕೆಟ್ ಒಡೆದು ತುಂಡಾಗಿರುವುದನ್ನು ಅಮೆರಿಕದ ಬಾಹ್ಯಾಕಾಶ ಕಾರ್ಯಕ್ರಮದ 18ನೇ ಬಾಹ್ಯಾಕಾಶ ರಕ್ಷಣಾ ವಿಭಾಗ ದೃಢಪಡಿಸಿದೆ.
Next Story





