ಚೀನಾ: ಸುನ್ ವೆಯಿಡಾಂಗ್ ಸಹಾಯಕ ವಿದೇಶಾಂಗ ಸಚಿವ

ಬೀಜಿಂಗ್, ನ.15: ಕಳೆದ ತಿಂಗಳಿನವರೆಗೆ ಭಾರತದಲ್ಲಿ ರಾಯಭಾರಿಯಾಗಿದ್ದ ಸುನ್ ವೆಯಿಡಾಂಗ್(Sun Weidong) ಅವರನ್ನು ಚೀನಾದ ನೂತನ ಸಹಾಯಕ ವಿದೇಶಾಂಗ ಸಚಿವರನ್ನಾಗಿ ನೇಮಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ಗ್ಲೋಬಲ್ ಟೈಮ್ಸ್' (``Global Times'')ವರದಿ ಮಾಡಿದೆ.
ಮುಂಬರುವ ವರ್ಷಗಳಲ್ಲಿ ದಕ್ಷಿಣ ಏಶ್ಯಾಕ್ಕೆ ಸಂಬಂಧಿಸಿದ ಚೀನಾದ ಕಾರ್ಯನೀತಿಗಳನ್ನು ರೂಪಿಸುವಲ್ಲಿ ವೆಯಿಡಾಂಗ್ ಪ್ರಮುಖ ಪಾತ್ರ ವಹಿಸುವ ಸೂಚನೆ ಇದಾಗಿದೆ. 2019ರಿಂದ 2022ರ ಅಕ್ಟೋಬರ್ವರೆಗೆ ಚೀನಾದ ರಾಯಭಾರಿಯಾಗಿ ಭಾರತದಲ್ಲಿ ವೆಯಿಡಾಂಗ್ ಕಾರ್ಯನಿರ್ವಹಿಸಿದ್ದು ಈ ಅವಧಿಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿತ್ತು. ಪೂರ್ವ ಲಡಾಕ್ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೇನೆಯ ನಡುವೆ ಉದ್ವಿಗ್ನತೆ ಹೆಚ್ಚಿತ್ತು ಹಾಗೂ 2020ರ ಜೂನ್ನಲ್ಲಿ ಗಲ್ವಾನ್ ಕಣಿವೆಯಲ್ಲಿ ಸಂಷರ್ಘ ನಡೆದಿತ್ತು.
2005ರಿಂದ 2008ರವರೆಗೆ ಭಾರತದಲ್ಲಿನ ಚೀನಾದ ರಾಯಭಾರಿ ಕಚೇರಿಯಲ್ಲಿ ಕೌನ್ಸೆಲರ್ ಆಗಿಯೂ ಅವರು ಕಾರ್ಯನಿರ್ವಹಿಸಿದ್ದರು.