ಈರಂದಾಡಿ ಕರಾಟೆ ಶಾಖೆಯ ವಿದ್ಯಾರ್ಥಿಗಳಿಗೆ ಪದಕ

ಮಂಗಳೂರು, ನ.16: ಉಡುಪಿಯ ಅಮೃತಗಾರ್ಡನ್‌ನಲ್ಲಿ ನಡೆದ 40ನೇ ಬುಡೋಕಾನ್ ಕರಾಟೆ ಡು ಇಂಟರ್ ನ್ಯಾಷನಲ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್- 2022ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಅಲೈಡ್ ಆರ್ಟ್ಸ್ ಇದರ ಈರಂದಾಡಿ ಕರಾಟೆ ಶಾಖೆಯ ವಿದ್ಯಾರ್ಥಿಗಳು ಸಮೂಹ ಕುಮಿಟೆ, ವೈಯಕ್ತಿಕ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ.
ಮುಹಮ್ಮದ್ ಆದಿಲ್ (ಟೀಮ್ ಕೋಚ್), ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ (ಮುಖ್ಯ ಕೋಚ್), ಕೃಷ್ಣ ಪ್ರಸಾದ್ (ಟೀಮ್ ಕೋಚ್-2 ಬೆಳ್ಳಿ ಮತ್ತು 1 ಕಂಚು) ಹಾಗೂ ಶಯಾನ್ ಉಮರ್ ಅಬ್ದುಲ್ಲಾ (1 ಕಂಚು), ಅಮೃತ್ ಡಿ. ಶೆಟ್ಟಿಗಾರ್ (1 ಬೆಳ್ಳಿ), ಶಿವಾನಿ ಬಿ. ಬಂಗೇರ (1ಚಿನ್ನ, 1 ಕಂಚು), ಮಾನ್ವಿ ಡಿಎಂ (1ಬೆಳ್ಳಿ), ಮುಹಮ್ಮದ್ ಇಶಾನ್ ಹುಸೈನ್ (1 ಕಂಚು), ಶಯಾಮ್ (2 ಬೆಳ್ಳಿ), ತರುಣ್ (2 ಕಂಚು), ಗಗನ್ ಕೆ (1 ಚಿನ್ನ, 1 ಬೆಳ್ಳಿ) ಪದಕ ಪಡೆದಿದ್ದಾರೆ.
Next Story