ಬೆಂಗಳೂರು | ಚಿತ್ರನಟಿಗೆ ಲೈಂಗಿಕ ಕಿರುಕುಳ ಆರೋಪ: ಚಾಲಕನ ವಿರುದ್ಧ ದೂರು ದಾಖಲು

ಬೆಂಗಳೂರು(Bengaluru), ನ. 16: ಚಿತ್ರನಟಿ, ಮಾಡೆಲ್ ಹಾಗೂ ಕಂಠದಾನ ಕಲಾವಿದೆಯಾಗಿದ್ದ ಯುವತಿಗೆ ಚಾಲಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಾವಿದೆಯು ಹೆಣ್ಣೂರು ಸರ್ವೀಸ್ ರಸ್ತೆಯ ಗಣೇಶ ಟೆಂಪಲ್ ಹತ್ತಿರದ ಬಿಬಿಎಂಪಿ ಸಾರ್ವಜನಿಕ ಶೌಚಾಲಯದ ಮುಂದೆ ನಿಂತು ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ಹೋಗಲು ರಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು.
ಅಲ್ಲಿಗೆ ಬಂದು ಕರೆದೊಯ್ಯುವ ವೇಳೆ ರಾಪಿಡೋ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ 21 ವರ್ಷದ ಕಲಾವಿದೆಯು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಟಿ ನೀಡಿದ ದೂರಿನನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Next Story





