ರೊಟೊಮ್ಯಾಕ್ ಗ್ಲೋಬಲ್‌ನಿಂದ ಬ್ಯಾಂಕ್‌ಗೆ 750 ಕೋ. ರೂ. ವಂಚನೆ ಆರೋಪ

ಹೊಸದಿಲ್ಲಿ, ನ. 16: ಇಂಡಿಯನ್ ಓವರ್‌ಸೀಸ್ ಬ್ಯಾಂಕ್(Indian Overseas Bank)ಗೆ 750 ಕೋ.ರೂ. ವಂಚಿಸಿರುವುದಾಗಿ ಕಾನ್ಪುರ ಮೂಲದ ರೊಟೊಮ್ಯಾಕ್ ಗ್ಲೋಬಲ್ ಹಾಗೂ ಅದರ ನಿರ್ದೇಶಕರ ವಿರುದ್ಧ ಸಿಬಿಐ ಆರೋಪ ಹೊರಿಸಿದೆ.
ಕಂಪೆನಿ ಹಾಗೂ ಅದರ ನಿರ್ದೇಶಕರಾದ ಸಾಧನ ಕೊಠಾರಿ (Kothari)ಹಾಗೂ ರಾಹುಲ್ ಕೊಠಾರಿ(Rahul Kothari) ವಿರುದ್ಧ ಸಿಬಿಐ ಕ್ರಿಮಿನಲ್ ಪಿತೂರಿ ಹಾಗೂ ವಂಚನೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್, ಅಲ್ಲದೆ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ನಿಯಮಗಳ ಅಡಿಯಲ್ಲಿ ಆರೋಪ ಹೊರಿಸಿದೆ.
ಒಕ್ಕೂಟದ ಸದಸ್ಯರ ದೂರಿನ ಆಧಾರದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ ಕಂಪೆನಿ ಈಗಾಗಲೇ ಹಲವು ತನಿಖೆಗಳನ್ನು ಎದುರಿಸಿದೆ.
ಬರವಣಿಗೆಯ ಉಪಕರಣಗಳ ವ್ಯವಹಾರ ಹೊಂದಿದ್ದ ರೊಟೊಮ್ಯಾಕ್ ಗ್ಲೋಬಲ್ ಕಂಪೆನಿ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 7 ಬ್ಯಾಂಕ್‌ಗಳ ಒಕ್ಕೂಟಕ್ಕೆ ಒಟ್ಟು 2,919 ಕೋ.ರೂ. ಬಾಕಿ ಪಾವತಿಸಬೇಕಾಗಿದೆ. ಇದರಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಪಾಲು ಶೇ. 23
ಸಿಬಿಐಗೆ ಸಲ್ಲಿಸಿದ ದೂರಿನಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ರೊಟೊಮ್ಯಾಕ್ ಗ್ಲೋಬಲ್ ಕಂಪೆನಿ 2012 ಜೂನ್ 28ರಲ್ಲಿ 500 ಕೋ.ರೂ.ನ ನಾನ್ ಫಂಡ್ ಆಧರಿತ ಮಿತಿಯನ್ನು ಜಾರಿಗೊಳಿಸಿತ್ತು ಎಂದು ಆರೋಪಿಸಿತ್ತು.







